ಬಾಯ್ಲರ್ ಸ್ವಚ್ಚತೆಗಿಳಿದ ಮೂವರು ದಾರುಣ ಸಾವು

ಬೆಂಗಳೂರು,ಜು,೧೧-ಬಾಯ್ಲರ್ ಸ್ವಚ್ಚತೆ ವೇಳೆ ಅಮ್ಲಜನಕ ಕೊರತೆಯಿಂದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಗರದ ಹೊರವಲಯದ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಮುಳಬಾಗಿಲು ಮೂಲದ ಲೋಕೇಶ್,ಹಾರೋಹಳ್ಳಿಯ ಮಹೇಶ್ ಹಾಗೂ ಚೆನ್ನೈ ಮೂಲದ ಶರವಣ ಎಂದು ಮೃತ ಕಾರ್ಮಿಕರನ್ನು ಗುರುತಿಸಲಾಗಿದೆ.ದುರ್ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ಹರಿವಿಲಿಘನ್ ಎಂಬುವರ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರು ಆಂಥ್ಯಾಸ್ ಬಯೋಕಾನ್ ಸೈನ್ಸ್ ಕಾರ್ಖಾನೆಯಲ್ಲಿ ನಿನ್ನೆ ರಾತ್ರಿ ದೊಡ್ಡ ಕೂಲ್ ಬಾಯ್ಲರ್ ಸ್ವಚ್ಛಗೊಳಿಸುತ್ತಿದ್ದ ಈ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಮೂವರ ಮೃತದೇಹಗಳನ್ನು  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ನೀಡಲಾಗಿದೆ .ಹಾರೋಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಖಾನೆಯ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Comment