ಬಾಬ್ರಿ ಮಸೀದಿ ಧ್ವಂಸಕ್ಕೆ 225 ವರ್ಷ : ಮರು ನಿರ್ಮಾಣಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಱ್ಯಾಲಿ

ರಾಯಚೂರು.ಡಿ.07- ಮುಸ್ಲೀಂ ಸಮುದಾಯ ಶ್ರದ್ಧಾ ಕೇಂದ್ರವಾಗಿದ್ದ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿ 25 ವರ್ಷ ಕಳೆದು ಹೋಗಿದ್ದು, ಕೂಡಲೇ ಮರು ನಿರ್ಮಾಣ ಮಾಡುವ ಮೂಲಕ ಸಮುದಾಯ ಜನರಿಗೆ ಪ್ರಾರ್ಥನೆಗೆ ಅವಕಾಶ ನೀಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದು ನಗರದ ಜಾಮೀಯಾ ಮಸೀದಿಯಿಂದ ಪ್ರತಿಭಟನಾ ಱ್ಯಾಲಿ ನಡೆಸುವ ಮೂಲಕ ಕರಾಳ ದಿನಾಚರಣೆ ಆಚರಣೆ ಮಾಡಲಾಯಿತು.
ಜಾಮೀಯಾ ಮಸೀದಿಯಲ್ಲಿ ಸಮಾವೇಶಗೊಂಡ ಜಿಲ್ಲಾ ಟಿಪ್ಪು ಸುಲ್ತಾನ ಸಂಘ ಹಾಗೂ ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ, ಎಂಐಎಂ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳು ಒಂದಾಗಿ ಱ್ಯಾಲಿ ನಡೆಸಿದವು. ರಾಮನ ಹೆಸರಿನಲ್ಲಿ ಕರ ಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿ ದೇಶದ ಭಾತೃತ್ವ ಮತ್ತು ಸೌಹಾರ್ದತೆದೆ ಧಕ್ಕೆಯುಂಟು ಮಾಡಿದ್ದಾರೆ. ಆದರೆ, ಇಂದಿಗೂ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದೇ ಇರುವದು ವಿಪರ್ಯಾಸ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದ ಕರಸೇವಕರನ್ನು ಬಂಧಿಸದೇ ಇರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯವಾಗಿದೆಂದು ಪ್ರತಿಭಟನಾಕಾರರು ಆರೋಪಿಸಿದರು. ಬಾಬ್ರಿ ಮಸೀದಿಯನ್ನು ಮರು ನಿರ್ಮಾಣ ಮಾಡಬೇಕು. 25 ವರ್ಷ ಕಳೆದರೂ ಆರೋಪಿಗಳನ್ನು ಬಂಧಿಸಿರುವದು ರಾಷ್ಟ್ರೀಯ ವಿಪರ್ಯಾಸವಾಗಿದ್ದು, ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು.
ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರದ ಬಾಬ್ರಿ ಮಸೀದಿಯನ್ನು ಮರು ನಿರ್ಮಾಣ ಮಾಡಿ, ಸಮುದಾಯ ಜನರಿಗೆ ಪ್ರಾರ್ಥನೆಗೆ ಮುಕ್ತ ಅವಕಾಶ ನೀಡಬೇಕೆಂದು ಆಗ್ರಹಿಸಿ ರಾಷ್ಟ್ರಪತಿ, ಪ್ರಧಾನಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಸಂಘದ ಸೈಯದ್ ಸಮೀರ್, ಜಹೂರ್ ಅಹ್ಮದ್, ಶೇಖ್ ಮಾಸೂಮ್, ಮಹ್ಮದ್ ಬಾಬಾ, ಎಂ.ಡಿ.ಇರ್ಫಾನ್, ಸೈಯದ್ ದಸ್ತಗಿರ, ಖಾಜಾ ಮಲ್ಲೀಕ್, ಮೊಹ್ಮದ ಮಜೀದ್, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಅಜೀಜ್ ಜಹಾಗೀರದಾರ, ಅಬ್ದುಲ್ ಲತೀಫ್ ಸಾಬ, ಅನ್ವರ್ ಹುಸೇನ, ಜಿಲಾನಿಪಾಷಾ ಯರಗೇರಾ, ನಾಸೀರ್ ಹುಸೇನ್, ಟಿಪ್ಪುಕ್ರಾಂತಿ ಸೇನೆ ಕರ್ನಾಟಕದ ಮೊಹ್ಮದ್ ಶೇಖ್ ಫಾರೂಕ್, ಸೈಯದ್ ಶಹನವಾಜ್ ಪಾಷಾ, ಹಾಜಿ ಮಸ್ತಾನ್, ಶಾಹಬಾಜ್ ಶೇಖ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Comment