ಬಾಬು ಜಗಜೀವನರಾಮ್ ಪುಣ್ಯಸ್ಮರಣೆ ನಾಳೆ

 

ಕಲಬುರಗಿ ಜು 5: ಮಾಜಿ ಉಪಪ್ರಧಾನಮಂತ್ರಿ ಹಸಿರು ಕ್ರಾಂತಿಯ ಹರಿಕಾರ ಡಾ .ಬಾಬು ಜಗಜೀವನರಾಮ್ ಅವರ 33 ನೆಯ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಡಾ.ಬಾಬು ಜಗಜೀವನರಾಮ್ ಅಭಿವೃದ್ಧಿ ಮತ್ತು ಹೋರಾಟ ಸಮಿತಿವತಿಯಿಂದ ನಾಳೆ ( ಜುಲೈ.6) ಬೆಳಿಗ್ಗೆ 11.30 ಕ್ಕೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕ ಉದ್ಯಾನದ ಡಾ.ಬಾಬು ಜಗಜೀವನರಾಮ್ ಮೂರ್ತಿ ಹತ್ತಿರ ಕಾರ್ಯಕ್ರಮ ನಡೆಯಲಿದ್ದು, ಸಂಸದ ಡಾ ಉಮೇಶ ಜಾಧವ ಅವರು ಜಗಜೀವನರಾಮ್ ಅವರ  ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು ಎಂದುಜಿಲ್ಲಾ ಸಮಿತಿ ಗೌರವಾಧ್ಯಕ್ಷ ಅಂಬಾರಾಯ ಎಂಕೆ ಚಲಗೇರಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಶಾಸಕರಾದ ಬಿ.ಜಿ ಪಾಟೀಲ,ಬಸವರಾಜ ಮತ್ತಿಮೂಡ,ಕನೀಜ್ ಫಾತಿಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಸಮಿತಿ ರಾಜ್ಯಾಧ್ಯಕ್ಷ ಭೀಮಣ್ಣ ಬಿಲ್ಲಾವ ನುಡಿ ನಮನ ಸಲ್ಲಿಸುವರು.ರಾಜು ವಾಡೇಕರ್ ನಾಗರಾಜ ಗುಂಡಗುರ್ತಿ ಶಾಮ ನಾಟೀಕರ್, ಲಿಂಗರಾಜ ತಾರಫೈಲ,ವಿಜಯಕುಮಾರ ಅಡಕಿ, ದಶರಥ ಕಲಗುರ್ತಿ ಗೋಪಿಕೃಷ್ಣ ಗುಡೇನವರ್ ಸೇರಿದಂತೆ ಅನೇಕರು ಪಾಲ್ಗೊಳ್ಳುವರು .ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜು ವಾಡೇಕರ್ ,ಯಲ್ಲಪ್ಪ ಮಾಳಗಿ ಉಪಸ್ಥಿತರಿದ್ದರು..

Leave a Comment