ಬಾಬರ್‍ಅಲಿ ಜತೆ ಸಂವಾದ 18 ರಂದು

ಕಲಬುರಗಿ ಸ 12: ನಗರದ  ಡಾ ಎಸ್ ಎಂ ಪಂಡಿತರಂಗ ಮಂದಿರದಲ್ಲಿ ಸಪ್ಟೆಂಬರ್ 18 ರಂದು ಬೆಳಿಗ್ಗೆ 10 ಗಂಟೆಗೆ

ಶಿವ ಪಿಯು ಮತ್ತು ಪದವಿ ಕಾಮರ್ಸ್ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳೊಂದಿಗೆ ಕಿರಿಯ ಶಿಕ್ಷಕ ಖ್ಯಾತಿಯ ಬಾಬರ್ ಅಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.

16 ನೆಯ ವಯಸ್ಸಿನಲ್ಲಿಯೇ  ಬಾಬರ್ ಅಲಿ ,ಪಶ್ಚಿಮ ಬಂಗಾಲದ ಹಳ್ಳಿಯೊಂದರಲ್ಲಿ  ಆನಂದ ಶಿಕ್ಷಣ ನಿಕೇತನ ಎಂಬ ಶಾಲೆ ಆರಂಭಿಸಿ,ವಿಶ್ವದ ಅತಿ ಕಿರಿಯ ಮುಖ್ಯ ಶಿಕ್ಷಕ ಎಂದು ಬಿಬಿಸಿ ಸುದ್ದಿವಾಹಿನಿಯಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಎಸ್ ಎಸ್ ಹಂಚಿನಾಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಎಸ್ ಆರ್ ಮಾಣಿಕ್ಯ ,ಎಸ್ಪಿ ಎನ್ ಶಶಿಕುಮಾರ, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮುಳೇಗಾಂವ್ ಆಗಮಿಸುವರು ಎಂದರು…

Leave a Comment