ಬಾಪೂಜಿ ಆಸ್ಪತ್ರೆಯ ಶುಶ್ರೂಷಕರ ಪ್ರತಿಭಟನೆ

ದಾವಣಗೆರೆ.ಜೂ.12; ಸೇವೆ ಖಾಯಂಗೊಳಿಸುವಂತೆ ಒತ್ತಾಯಿಸಿ ನಗರದ ಬಾಪೂಜಿ ಆಸ್ಪತ್ರೆಯ ಶುಶ್ರೂಷಕರು ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಆಸ್ಪತ್ರೆಯ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಜಮಾಯಿಸಿದ ಶುಶ್ರೂಷಕರು ಸೇವೆ ಖಾಯಂಗೊಳಿಸದೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿದರು. ಕಳೆದ ನಾಲ್ಕು ವರ್ಷಗಳಿಂದ ಬಾಪೂಜಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಟಾಫ್ ನರ್ಸ್‍ಗಳನ್ನು ಇಲ್ಲಿಯವರೆಗೂ ಖಾಯಂಗೊಳಿಸಿಲ್ಲ. ಆಸ್ಪತ್ರೆಗೆ ಸೇರಿಸಿಕೊಳ್ಳುವ ಸಮಯದಲ್ಲಿ ಮೂರು ವರ್ಷದಲ್ಲೇ ಸೇವೆ ಖಾಯಂಗೊಳಿಸಲಾಗುವುದು ಎಂದು ತಿಳಿಸಿರುವ ಆಡಳಿತ ಮಂಡಳಿಯವರು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೂ ಶುಶ್ರೂಷಕರನ್ನು ಖಾಯಂಗೊಳಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ನಮಗೆ ಸೇವಾ ಭದ್ರತೆ ಇಲ್ಲದಂತಾಗಿದೆ. ಈ ಕೂಡಲೇ ಆಡಳಿತ ಮಂಡಳಿಯವರು ನಮ್ಮ ಸೇವೆ ಖಾಯಂಗೊಳಿಸಿ ನಮಗೆ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶುಶ್ರೂಷಕರಿದ್ದರು.

Leave a Comment