ಬಾದಾಮಿ ಹಾಲಿನ ರಹ್ಯಸ

ಬಾದಾಮಿ ಹಾಲು ಎಂದು ಇತ್ತೀಚೆಗೆ ಒಂದು ಪೇಯ ಮಾರುಕಟ್ಟೆಯಲ್ಲಿ ದೊರಕುತ್ತಿದೆ. ಹಿಂದೆಯೋ ಬಾದಾಮಿ ಹಾಲು ಎಂಬ ಪೊಟ್ಟಣ ಸಿಗುತ್ತಿತ್ತು, ಇದನ್ನು ಬರೆ ಬಿಸಿಹಾಲಿಗೆ ಬೆರೆಸಿ ಕುಡಿಯುತ್ತಿದ್ದೆವು. ಆದರೆ ಇದು ಕೇವಲ ಬಾದಾಮಿಯ ರುಚಿ ಹೊಂದಿದ್ದ ಅಗ್ಗದ ಪೇಯವಾಗಿತ್ತು.

ಬಾದಾಮಿ ಹಾಲು ಸೇವನೆಯಿಂದ ತೂಕದಲ್ಲಿ ಇಳಿಕೆ, ಉತ್ತಮಗೊಂಡಿರುವ ದೃಷ್ಟಿ, ಗಟ್ಟಿಗೊಂಡಿರುವ ಮೂಳೆಗಳು ಮತ್ತು ಆರೋಗ್ಯವಂತ ಹೃದಯ ಪ್ರಮುಖವಾಗಿವೆ. ಅಲ್ಲದೇ ಸ್ನಾಯುಗಳು ಬಲಗೊಳ್ಳಲು, ರಕ್ತದ ಒತ್ತಡ ಸಮತೋಲನದಲ್ಲಿರಿಸಲು, ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸಲು ಸಹಾ ನೆರವಾಗುತ್ತದೆ. ಬಾದಾಮಿ ಹಾಲಿನಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಹೇರಳವಾಗಿವೆ. ಅಲ್ಲದೇ ಇತರ ವಿಟಮಿನುಗಳು, ಖನಿಜಗಳು ಹಾಗೂ ವಿಶೇಷವಾಗಿ ವಿಟಮಿನ್ ಇ ಸಹಾ ಉತ್ತಮ ಪ್ರಮಾಣದಲ್ಲಿವೆ. ಇದರಲ್ಲಿ ಪೂರ್ಣ ಆರ್ದ್ರವಾದ ಅಥವಾ ಸ್ಯಾಚುರೇಟೆಡ್ ಕೊಬ್ಬು ಇಲ್ಲವೇ ಇಲ್ಲ. ಅಲ್ಲದೇ ಇದರಲ್ಲಿ ಸೋಡಿಯಂ ಲವಣ ಅತಿ ಕಡಿಮೆ ಪ್ರಮಾಣದಲ್ಲಿದ್ದು ಒಮೆಗಾ ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿವೆ. ಇವು ರಕ್ತದ ಒತ್ತಡವನ್ನು ಕಡಿಮೆಗೊಳಿಸಿ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತವೆ.

ಮಧುಮೇಹಿಗಳಿಗೂ ಉತ್ತಮ ಬಾದಾಮಿ ಹಾಲು ನಿಧಾನವಾಗಿ ಜೀರ್ಣಗೊಳ್ಳುವ ಅಂದರೆ ಗೈಸಮಿಕ್ ಇಂಡೆಕ್ಸ್ ಎಂಬ ಕೋಷ್ಟಕದಲ್ಲಿ ಹೆಚ್ಚಿನ ಮಾಪನ ಹೊಂದಿರುವ ಆಹಾರವಾಗಿದೆ. ಇದರಲ್ಲಿರುವ ಎಲ್ಲಾ ಪೋಷಕಾಂಶಗಳು ಜೀರ್ಣಿಸಲ್ಪಟ್ಟು ಬಳಕೆಯಾಗುತ್ತವೆಯೇ ವಿನಃ ಹಸುವಿನ ಹಾಲಿನಂತೆ ಕೊಬ್ಬು ದೇಹದಲ್ಲಿ ಸಂಗ್ರಹವಾಗುವುದಿಲ್ಲ. ಇದೇ ಕಾರಣಕ್ಕೆ ಈ ಹಾಲು ಮಧುಮೇಹಿಗಳಿಗೆ ಹೆಚ್ಚು ಸೂಕ್ತವಾಗಿದೆ.

ಸ್ನಾಯುಗಳ ಬಲ ಹೆಚ್ಚುಸುವಲ್ಲಿ ಕೂಡ ಬಾದಾಮಿ ಹಾಲು ಮಹತ್ವ ಪಾತ್ರ ವಹಿಸುತ್ತದೆ. ಕಬ್ಬಿಣ, ರೈಬೋಫ್ಲೀವಿನ್ ನಂತಹ ಬಿ-ವಿಟಮಿನ್ ಗುಂಪಿಗೆ ಸೇರಿದ ಪೋಷಕಾಂಶಗಳು ಸ್ನಾಯುಗಳನ್ನು ಬಲಬಡಿಸಲು, ವೃದ್ಧಿಸಲು ಹಾಗೂ ಘಾಸಿಗೊಂಡ ಸ್ನಾಯುಗಳನ್ನು ಗುಣಪಡಿಸಲು ನೆರವಾಗುತ್ತವೆ. ವಿಟಮಿನ್ ಡಿ ಕೊರತೆಯಿಂದ ಮೂಳೆಗಳು ಶಿಥಿಲಗೊಳ್ಳುತ್ತವೆ. ಅಲ್ಲದೇ ಸುಸ್ತು ಹಾಗೂ ಸ್ನಾಯುಗಳಲ್ಲಿ ಬಲವಿಲ್ಲದಿರುವಿಕೆಯೂ ಆವರಿಸುತ್ತದೆ. ಬಾದಾಮಿ ಹಾಲಿನ ಸೇವನೆಯಿಂದ ಈ ಕೊರತೆಗಳು ಕಡಿಮೆಯಾಗುತ್ತವೆ. ಬಾದಾಮಿ ಹಾಲಿನ ಸೇವನೆಯ ಅತ್ಯುತ್ತಮ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ. ಈ ಹಾಲಿನಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿದ್ದರೂ ಇತರ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿದ್ದು ದಿನದ ಚಟುವಟಿಕೆಯ ಅಗತ್ಯವನ್ನು ಪೂರೈಸುತ್ತದೆ.

Leave a Comment