ಬಾಣಾಪುರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬಳ್ಳಾರಿ, ಜು.01: ಕರ್ನಾಟಕ ಕ್ರೀಯಾಶೀಲ ಪದವೀದರರ ವೇದಿಕೆ ವತಿಯಿಂದ ತಾಲೂಕಿನ ಬಾಣಾಪುರ ಗ್ರಾಮದ ಪ್ರೌಢ ಶಾಲೆಯಲ್ಲಿ ಈ ಭಾಗದ ಬೆಣಕಲ್ಲು, ಬಸರಕೋಡು, ಮೋಕಾ ಗ್ರಾಮಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಾಣಾಪುರ ಶಾಲೆ ಕುಮಾರ್, ಗಾದಿಲಿಂಗ, ಬೆಣಕಲ್ಲು ಶಾಲೆ ರಾಘವೇಂದ್ರ, ಬಸರಕೋಡು ಶಾಲೆಯ ಗಂಗಪ್ಪ, ವರ್ಷಿತಾ, ಶರ್ಮಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರಿಸಲಾಯಿತು.

ವೇದಿಕೆ ರಾಜ್ಯಾಧ್ಯಕ್ಷ ಗೋವರ್ಧನ ಕೆ.ಕೆ.ಹಾಳ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ತಕ್ಕ ಸೌಲಭ್ಯಗಳಿಲ್ಲದಿದ್ದರೂ ಸಹ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಗ್ರಾಮಗಳಿಗೆ ಕೀರ್ತಿ ತಂದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡ ಬಿ.ಎಸ್. ತಿಮ್ಮಾರೆಡ್ಡಿ, ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮೀಣ ಭಾಗದ ಅಧ್ಯಕ್ಷ ಪೊಂಪನಗೌಡ, ವಾಗೀಶ್, ರಮೇಶ್, ದೇವರಾಜ್, ಸುರೇಶ್ ಕೆ. ಶಿವಪ್ಪ, ರಂಜಿತಾ.ಪಿ, ಶ್ರೀದೇವಿ, ದೇವಣ್ಣ ಕೆ, ರಂಗಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅತಿಥಿ ಶಿಕ್ಷಕ ಧನುಂಜಯ ಕಾರ್ಯಕ್ರಮ ನಿರೂಪಿಸಿದರು.

Leave a Comment