ಬಾಡಿದ ಬೆಳೆ ನೋಡಲಾಗದೆ ರೈತ ಆತ್ಮಹತ್ಯೆ

ಔರಾದ್,ಆ.10-ಮಳೆಯ ಕೊರತೆಯಿಂದ ಬಾಡಿ ಹೋಗುತ್ತಿರುವ ಬೆಳೆ ನೋಡಲಾಗದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಔರಾದ್ ತಾಲ್ಲೂಕಿನ ಜೊನ್ನೆಕೇರಿ ಗ್ರಾಮದಲ್ಲಿ  ಗುರುವಾರ ನಡೆದಿದೆ.

ಹಣಮಂತರಾವ  ಚೆನ್ನಬಸಪ್ಪ ಬಿರಾದಾರ (50) ಆತ್ಮಹತ್ಯೆಗೆ ಶರಣಾದ ರೈತ.

ಮಳೆ ಕೊರತೆಯಿಂದ ಬಾಡಿ ಹೋಗುತ್ತಿರುವ ಬೇಳೆ ನೋಡಲಾಗದೆ ವಿಷ ಸೇವಿಸಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಶರಣಾಗಿರುವ ರೈತ ಹಣಮಂತರಾವ ಬಿರಾದಾರ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಮೃತ ರೈತನ ಪುತ್ರ ಸಂತಪುರ ಪೊಲೀಸ್  ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.

Leave a Comment