ಬಾಡಿಗೆ ಹಣಕ್ಕೆ ನಾಮ ಸುದೀಪ್ ವಿರುದ್ದ ಆರೋಪ

ಚಿಕ್ಕಮಗಳೂರು,ಆ.೧-ವಾರಸ್ದಾರ ಧಾರಾವಾಹಿಯ ಚಿತ್ರೀಕರಣಕ್ಕೆ ಎಸ್ಟೇಟ್ ಬಾಡಿಗೆ ಪಡೆದ ಹಣ ನೀಡದೆ ನಟ,ನಿರ್ಮಾಪಕ ಸುದೀಪ್ ವಂಚಿಸಿದ್ದಾರೆ ಎಂದು ಎಸ್ಟೇಟ್ ಮಾಲೀಕ ದೀಪಕ್ ಮಯೂರ್ ಪಟೇಲ್ ಆರೋಪಿಸಿದ್ದಾರೆ.
ಧಾರಾವಾಹಿಯ ಚಿತ್ರೀಕರಣಕ್ಕೆ ಎಸ್ಟೇಟ್ ಬಳಸಿಕೊಂಡು, ಎಸ್ಟೇಟ್ ಹಾಳು ಮಾಡಿದ್ದಾರೆ. ಧಾರಾವಾಹಿ ಮುಗಿದ ಬಳಿಕ ಬಾಕಿ ಹಣ ನೀಡದೆ ವಂಚಿಸಿದ್ದು ಈ ಸಂಬಂಧ ಬಾಕಿ ಹಣ ಕೊಡಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಮುಖ್ಯಮಂತ್ರಿಗೆ ದೂರು ಸಲ್ಲಿಸಲು ಮುಂದಾಗಿರುವುದಾಗಿ ಎಂದು ಹೇಳಿದ್ದಾರೆ.
ಚಿಕ್ಕಮಗಳೂರಿನ ಎಸ್ಟೇಟ್ ಅನ್ನು ವಾರಸ್ದಾರ ಧಾರಾವಾಹಿಯ ಚಿತ್ರೀಕರಣಕ್ಕೆ ಬಳಸಿಕೊಂಡಿದ್ದ ಧಾರಾವಾಹಿಯ ನಿರ್ಮಾಪಕ ಸುದೀಪ್, ಬಾಕಿ ಹಣ ನೀಡದೆ ವಂಚಿಸಿದ್ದಾರೆ ಎಂದು ದೀಪಕ್ ಆರೋಪ ಮಾಡಿದ್ದಾರೆ.
ದೀಪಕ್ ಆರೋಪದ ಬಗ್ಗೆ ನಟ, ನಿರ್ಮಾಪಕ ಸುದೀಪ್ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Leave a Comment