ಬಾಗಲಕೋಟೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫೂ ಜಾರಿ; ಕಾರಜೋಳ

ಬಾಗಲಕೋಟೆ, ಜೂನ್ 30- ಬಾಗಲಕೋಟೆ ಜಿಲ್ಲೆಯಾದ್ಯಂತ ಇಂದಿನಿಂದ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಕಪ್ರ್ಯೂ ಜಾರಿಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ನಗರದ ನೂತನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಬಜ್ಜ , ಚೋಡ, ತಂಪು ಪಾನಿಯ ಹಾಗೂ ಹಣ್ಣಿನ ರಸ ಅಂಗಡಿಗಳಿಂದ ಅಪಾಯವಿದೆ ಈ ಹಿನ್ನೆಲೆಯಲ್ಲಿ ಸಂಜೆ 6 ರಿಂದ ಬೆಳಿಗ್ಗೆ 6 ವರೆಗೆ ಕಪ್ರ್ಯೂ ಜಾರಿ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿನ 9 ತಾಲೂಕಾ ಕೇಂದ್ರಗಳಿಗೆ ಪ್ಲೈಯಿಂಗ್ ಸ್ಕ್ವಾಡ್ಗಳನ್ನು ನೇಮಕಮಾಡಲಾಗಿದ್ದು, ಅವರು ದಿನದಿತ್ಯ ಮಾರ್ಕೆಟ್ , ಹೋಟಲ್, ಖರೀದಿ ಸ್ಥಳಗಳಲ್ಲಿ ನಿಗಾವಹಿಸಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಈ ವರೆಗೆ 12587 ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷಿಸಲಾಗಿದ್ದು, ಈ ಪೈಕಿ 11089 ನೆಗಟಿವ್, 184 ಪಾಜಿಟಿವ್ ಪ್ರಕರಣ ವರದಿಯಾಗಿದ್ದು ಇನ್ನೂ 1245 ಸ್ಯಾಂಪಲ್ಗಳ ವರದಿ ಬರಬೇಕಾಗಿದೆ ಎಂದು ಮಾಹಿತಿ ನೀಡಿದರು.

117 ಜನ ಕೋವಿಡ್ಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. 62 ಮಾತ್ರ ಸಕ್ರಿಯ ಪ್ರಕರಣಗಳು ಇವೆ. 14 ಫೀವರ್ ಕ್ಲಿನಿಕಗಳ ಮೂಲಕ 16,825 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ. 52 ಸಾಂಸ್ಥಿಕ ಕ್ವಾರಂಟೈನ್ಗಳಲ್ಲಿ 540 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಗಳು ವಾಸಿಸುವ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ಗಳೆಂದು ಘೋಷಿಸಲಾಗಿದ್ದು, ಸದ್ಯ 18 ಕಂಟೈನ್ಮೆಂಟ್ ಝೋನ್ಗಳಿವೆ. ನಿಷೇಧಿತ ಪ್ರದೇಶದಲ್ಲಿರುವ ಜನರಿಗೆ ಆಹಾರಧಾನ್ಯ, ತರಕಾರಿ, ಹಣ್ಣು ಹಂಪಲ, ಔಷಧ ಹಾಗೂ ಇನ್ನಿತರೆ ಮೂಲಭೂತ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ಪೂರೈಸಲಾಗುತ್ತಿದೆ. ಬೇರೆ ರಾಜ್ಯದಿಂದ ಬಸ್ಗಳ ಮೂಲಕ 2833, ರೈಲಿನ ಮೂಲಕ 446 ಜನ ಬಂದಿದ್ದು, ಅವರನ್ನು ಸಾಂಸ್ಥಿಕ ಮತ್ತು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದರು.
ಜಿಲ್ಲೆಯಿಂದ ವಿವಿಧ ರಾಜ್ಯಗಳಿಗೆ 67 ವಾಹನಗಳ ಮೂಲಕ ತೆರಳಲು ಒಟ್ಟು 859 ವಲಸೆ ಕಾರ್ಮಿಕರಿಗೆ ಅನುಮತಿ ನೀಡಲಾಗಿದೆ.
ಈ ಪೈಕಿ ಉತ್ತರ ಪ್ರದೇಶದಿಂದ 812, ಜಾರ್ಖಂಡದಿಂದ 204, ಬಿಹಾರ 201, ಮಧ್ಯಪ್ರದೇಶ 5 ಹಾಗೂ ಪಶ್ವಿಮ ಬಂಗಾಳ ರಾಜ್ಯಕ್ಕೆ 17 ಜನರನ್ನು ರೈಲಿನ ಮೂಲಕ ಕಳುಹಿಸಲಾಗಿದೆ. ಬೇರ ರಾಜ್ಯಗಳಿಂದ ಆಗಮಿಸಿದ ವಲಸಿಗರ ಸ್ವೀಕೃತಿ ಕೇಂದ್ರವನ್ನು ನವನಗರದ ಬಸ್ ನಿಲ್ದಾಣದಲ್ಲಿ ಸ್ಥಾಪಿಸಲಾಗಿದ್ದು, ದಿನ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದೆ ಎಂದರು.

ಕ್ವಾರಂಟೈನ್ ವಾಚ್ ಆಪ್, ಕಾಂಟ್ಯಾಕ್ಟ ಟ್ರೇಸಿಂಗ್ ಆಪ್, ಹೆಲ್ತ್ ವಾಚ್ ಮತ್ತು ಕಂಟೈನ್ಮೆಂಟ್ ವಾಚ್ ಆಪ್ಗಳ ನಿರ್ವಹಣೆಗಾಗಿ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿ ಮಾಹಿತಿಯನ್ನು ಕೆಂದ್ರೀಕರಿಸಲು ಸೂಕ್ತ ಕ್ರಮವಹಿಸಲಾಗಿದೆ ಎಂದರು.
ಕೋವಿಡ್ ನಿಯಂತ್ರಣಕ್ಕಾಗಿ ಗ್ರಾಮ ಮಟ್ಟದಲ್ಲಿ ಗಸ್ತು ಜಾಗೃತಿ ತಂಡವನ್ನು ರಚಿಸಿ ಗ್ರಾಮಗಳಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a Comment