ಬಾಂಬ್ ಭೀತಿ: ಆತಂಕದಿಂದ ನಿರಾಳವಾದ ಬಂದರು ನಗರಿ

ಮಂಗಳೂರು, ಜ 21- ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಂಬ್ ನಿಷ್ಕ್ರಿಯಗೊಳಿಸಿದ ನಂತರ ಬಂದರು ನಗರಿಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮಂಗಳವಾರ ಪರಿಸ್ಥಿತಿ ಸಾಮಾನ್ಯಸ್ಥಿತಿಗೆ ತಲುಪಿದೆ. ಕೆಂಜಾರು ಮೈದಾನದಲ್ಲಿ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ ನಂತರ ಪ್ರತಿಯೊಬ್ಬರು ಆತಂಕದಿಂದ ನಿರಾಳಗಾರಿದ್ದಾರೆ. ಸೋಮವಾರ ಸಂಜೆ ಬಾಂಬ್ ಇದ್ದ ಬ್ಯಾಗ್ ಸ್ಫೋಟಿಸಿ, ನಿಷ್ಕ್ರಿಯಗೊಳಿಸುವುದರೊಂದಿಗೆ ಇಡೀ ದಿನ ಉಂಟಾಗಿದ್ದ ಆತಂಕ ಕೊನೆಗೊಂಡಿದೆ.
ವಿಮಾನನಿಲ್ದಾಣದಿಂದ ಬ್ಯಾಗ್ ಅನ್ನು ಹೊರಗೆ ಸಾಗಿಸುವುದು ಪೊಲೀಸರು ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಕಠಿಣ ಕೆಲಸವಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ 9 ಗಂಟೆ ವೇಳೆಗೆ ಸ್ಫೋಟಕಗಳಿದ್ದ ಬ್ಯಾಗ್ ಪತ್ತೆಯಾಗುತ್ತಿದ್ದಂತೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣವೇ ಪೊಲೀಸರು ವಿಮಾನ ನಿಲ್ದಾಣ ಎದುರಿನ ಇಡೀ ಪ್ರದೇಶವನ್ನು ಸುತ್ತವರೆದಿದ್ದರು. ನಂತರ ಪೊಲೀಸರು ತುಂಬಾ ಎಚ್ಚರದಿಂದ ಬ್ಯಾಗ್ ಅನ್ನು ವಾಹನದ ಮೂಲಕ ಮೈದಾನಕ್ಕೆ ಸಾಗಿಸಿದ್ದಾರೆ. ಬ್ಯಾಗ್ ಅನ್ನು ತುಂಬಾ ದೂರದವರೆಗೆ ಸಾಗಿಸುವುದು ಸಹ ಅಪಾಯವಾಗಿದ್ದರಿಂದ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಪೊಲೀಸರು ಎಚ್ಚರದಿಂದ ಸಾಗಿಸಿದರು.
ಕೆಂಜಾರು ಮೈದಾನಕ್ಕೆ ಸಾಗಿಸುವ ತೀರ್ಮಾನವನ್ನು ಡಾ.ಹರ್ಷ ಅವರೇ ತೆಗೆದುಕೊಂಡಿದ್ದರು. ವಿಮಾನ ನಿಲ್ದಾಣದಿಂದ ಶ್ರೀ ದೇವಿ ತಾಂತ್ರಿಕ ವಿದ್ಯಾಲಯಕ್ಕೆ ಬ್ಯಾಗ್ ಸಾಗಿಸಲು ಅರ್ಧ ತಾಸು ಹಿಡಿದಿತ್ತು. ರಸ್ತೆಯಿಂದ 100 ಅಡಿ ಆಳದ ಇಳಿಜಾರಿನಲ್ಲಿ ಟ್ರಾಕ್ಟರ್ ಅನ್ನು ಚಾಲಕ ಇಳಿಸಲಾಗಲು ಸಾಧ್ಯವಾಗಿದ್ದರಿಂದ ಎದೆಬಡಿತ ಹೆಚ್ಚಾಗಿತ್ತು. ಟ್ರಾಕ್ಟರ್ ಕೆಳಗೆ ಇಳಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಅಲ್ಲೇ ಬ್ಯಾಗ್ ಅನ್ನು ಇಳಿಸಲಾಯಿತು. ವಾಹನವನ್ನು ಹಿಡಿಟ್ಟುಕೊಂಡು, ನಿಯಂತ್ರಿಸಲು ಕ್ರೇನ್‍ವೊಂದನ್ನು ಬಳಸಿಕೊಳ್ಳಲಾಗಿತ್ತು. ಟ್ರಾಕ್ಟರ್ ಅನ್ನು ತಳ್ಳಲು ಸ್ವಯಂಚಾಲಿತ ಯಂತ್ರವನ್ನು ಬಳಸಿಕೊಳ್ಳಲಾಗಿತ್ತು. ಅಲ್ಲದೆ, ಸ್ಫೋಟಕ್ಕೆ ಬಳಸಲಾಗಿದ್ದ ತಂತಿ ಸಹ ವಿಫಲವಾಗಿದ್ದರಿಂದ ಆತಂಕ ಹೆಚ್ಚಾಗಿತ್ತು. ತಕ್ಷಣವೇ ಹೊಸ ತಂತಿಯನ್ನು ತಂದು ಜೋಡಿಸಲಾಗಿತ್ತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಜಾಗದ ಸುತ್ತ ಮಣ್ಣಿನಮೂಟೆಗಳನ್ನು ಜೋಡಿಸಲಾಗಿತ್ತು.

Leave a Comment