ಬಾಂಧವ್ಯದ ಅಮ್ಮನ ಮನೆ

ಪ್ರಕಾಶ್

ರಾಘವೇಂದ್ರ ರಾಜಕುಮಾರ್ ಸುಮಾರು ೧೪ ವರ್ಷಗಳ ನಂತರ ನಟಿಸುತ್ತಿರುವ ಹೊಸ ಚಿತ್ರ ’ಅಮ್ಮನ ಮನೆ’ ಚಿತ್ರೀಕರಣ ಆರಂಭಗೊಂಡಿದೆ.ರಾಘಣ್ಣನ ಹುಟ್ಟುಹಬ್ಬವಾದ ಕಳೆದ ಬುಧವಾರ ಅಮ್ಮನ ಮನೆ ಮುಹೂರ್ತ ನಡೆದಿದ್ದು ಈ ಚಿತ್ರದಲ್ಲಿ ಹಿರಿಯ ರಂಗ ಕಲಾವಿದೆ ಬಿ.ಜಯಶ್ರೀ ಅಭಿನಯಿಸುತ್ತಿರುವುದು ವಿಶೇಷ.

ದೈಹಿಕ ಶೀಕ್ಷಕನಾಗಿ ರಾಘಣ್ಣ ಅಮ್ಮನೆಮನೆಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದು ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಡಾ. ರಾಜ್‌ಕುಮಾರ್ ಕುಟುಂಬದವರು ಮುಹೂರ್ತಕ್ಕೆ ಆಗಮಿಸಿ ಶುಭ ಹಾರೈಸಿ ಹೋಗಿದ್ದಾರೆ.ಮುಹೂರ್ತದ ನಂತರ  ಮಾತನಾಡಿದ ರಾಘವೇಂದ್ರ ರಾಜಕುಮಾರ್, ಇದು ನನ್ನ ಚಿತ್ರವಲ್ಲ. ಬದಲಿಗೆ ಒಂದೊಳ್ಳೆಯ ಚಿತ್ರದಲ್ಲಿ ತಾನಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನಾನು ೧೪ ವರ್ಷಗಳ ಬಳಿಕ ಮತ್ತೆ ಬಂದಿದ್ದೇನೆ. ಇದು ನನ್ನ ಎರಡನೇಯ ಇನ್ನಿಂಗ್ಸ್ ನಿರ್ದೇಶಕ ನಿಖಿಲ್ ಮಂಜು ಒಳ್ಳೆಯ ಕಥೆ ತಂದರು. ಕಥೆ  ಕೇಳಿ  ಬಹಳ ಇಷ್ಟವಾಯಿತು. ಹಾಗಾಗಿ ಒಪ್ಪಿಕೊಂಡೆ. ನಾನು ಅನಾರೋಗ್ಯದಿಂದಿರುವಾಗ ಹೇಗೆ ಈ ಪಾತ್ರಕ್ಕೆ ಸೂಕ್ತ ಎಂದು ಎಲ್ಲರಿಗೂ ಪ್ರಶ್ನೆ ಕಾಡಬಹುದು. ನಿರ್ದೇಶಕರು ಈ ಕಥೆ ತಂದಾಗ, ನಾನೂ ಈ ಪ್ರಶ್ನೆಯನ್ನೇ ಮುಂದಿಟ್ಟೆ. ಆಗ ನಿರ್ದೇಶಕರು, ತಮಗೆ ’ನಂಜುಂಡಿ ಕಲ್ಯಾಣ’ ಮತ್ತು ’ಗಜಪತಿ ಗರ್ವಭಂಗ’ ಚಿತ್ರದ ರಾಘಣ್ಣ ಬೇಡ. ಕಳೆದ ೧೫ ವರ್ಷಗಳಿಂದ ಜವಾಬ್ದಾರಿ ಹೊತ್ತು ಫ್ಯಾಮಿಲಿಯನ್ನು ತೂಗಿಸಿಕೊಂಡು ಹೋಗುತ್ತಿರುವ ರಾಘಣ್ಣ ಬೇಕು ಎಂದರು.

ಅದೇ ಕಾರಣಕ್ಕೆ ಈ ಚಿತ್ರ ಒಪ್ಪಿದೆ. ಮೊದಲ ಚಿತ್ರದ ವೇಳೆ ಅಪ್ಪ, ಅಮ್ಮ ಇದ್ದರು. ಅವರ ದೊಡ್ಡ ಸಹಕಾರವಿತ್ತು. ಈಗ ಅವರಿಲ್ಲ. ಅವರನ್ನು ಈ ತಂಡದಲ್ಲಿ ನೋಡುತ್ತಿದ್ದೇನೆ ಎನ್ನುತ್ತಾರೆ ರಾಘಣ್ಣ. ತಾನು ಸಿನಿಮಾದಲ್ಲಿ ಇದ್ದೀನಿ ಅನ್ನೋದು ಬಿಟ್ಟರೆ, ನಿರ್ದೇಶಕರು ಹೇಳಿದ್ದನ್ನು ಒಪ್ಪಿಸೋದಷ್ಟೇ ನನ್ನ ಕೆಲಸ. ಜನರನ್ನು ಒಪ್ಪಿಸುವ ಕೆಲಸ ನಿರ್ದೇಶಕರು ಮಾಡುತ್ತಾರೆ. ನೋಡುಗರನ್ನು ತೃಪ್ತಿ ಪಡಿಸುತ್ತಾರೆ ಎಂಬ ನಂಬಿಕೆ ಇದೆ. ಈ ಪಾತ್ರಕ್ಕೆ ಯಾವ ತಯಾರಿ ಇಲ್ಲ. ಖಾಲಿ ಹಾಳೆಯ ತರಹ ಹೋಗುತ್ತೀನಿ. ನಿರ್ದೇಶಕರು ಬರೆದ ಹಾಗೆ ಬರೆಸಿಕೊಳ್ತೀನಿ ಎಂದು ಅವರು ಹೇಳುತ್ತಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ,ನಿರ್ದೇಶಕ ನಿಖಿಲ್‌ಮಂಜೂ ಲಿಂಗಯ್ಯ ಅವರು ಅಮ್ಮನ ಮನೆಯ. ನಿರ್ದೇಶಕರಾಗಿದ್ದಾರೆ ಚಿತ್ರ ವಿವರ ನೀಡಿದ ಅವರು ಇಲ್ಲಿಯವರೆವಿಗೂ ಪ್ರಶಸ್ತಿ, ಸ್ಪರ್ಧೆಗೆ ಅಂತಲೇ ಚಿತ್ರಗಳನ್ನು ಮಾಡಲಾಗಿತ್ತು. ಈ ಬಾರಿ ಜನಗಳ ಹತ್ತಿರ ತೆಗೆದುಕೊಂಡು ಹೋಗುವ ಮಹಾದಾಸೆಯಿಂದ ಇಂತಹ ಪ್ರಯತ್ನಕ್ಕೆ ಕೈ ಹಾಕಲಾಗಿದೆ.

ಪ್ರಚಲಿತ ಸಮಾಜದಲ್ಲಿ ಸಂಬಂದದ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ವಯಸ್ಸಾದವರನ್ನು ಪೋಷಿಸುವ ಬದಲು ಕಡೆಗಣಿ ಸಲಾಗುತ್ತಿದೆ.ಅಂತಹ ಏಳೆಯನ್ನು ತೆಗೆದುಕೊಳ್ಳಲಾಗಿದೆ.

೭೦ ವರ್ಷ ವಯಸ್ಸಿನ ತಾಯಿಯೊಂದಿಗೆ ಇರುವ ಮಗ, ವಯೋ ಸಹಜ ಖಾಯಿಲೆಯಿಂದ ಮರಣ ಹೊಂದಿದಾಗ, ಮಗನಾದವನು ಹೆಂಡತಿ, ಮಕ್ಕಳನ್ನು ಸರಿದೂಗಿಸುವ ಜೊತೆಗೆ, ಆಕೆಯ ಸಾವನ್ನು ಯಾವ ರೀತಿಯಲ್ಲಿ ತಡೆದುಕೊಳ್ಳುತ್ತಾನೆ. ಇಂತಹ ಸೂಕ್ಷ ಅಂಶಗಳನ್ನು ಬಳಸಲಾಗುತ್ತಿದೆ. ಮನೆ, ಶಾಲೆ, ರಸ್ತೆಗಳಲ್ಲಿ ಬಹುತೇಕ ಕತೆ ಸಾಗುತ್ತದೆ.ದೈಹಿಕ ಶಿಕ್ಷಕನ ಪಾತ್ರದಲ್ಲಿ ರಾಘಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ೩೫ ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ ಎನ್ನುತ್ತಾರೆ.

ಆತ್ಮಶ್ರೀ ಮತ್ತು ಆರ್.ಎಸ್.ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.ಎರಡು ಹಾಡುಗಳಿಗೆ ಸಮೀರ್‌ಕುಲಕರ್ಣೀ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಗ್ರಹಣ ಪಿ.ವಿ.ಆರ್.ಸ್ವಾಮಿ, ಸಂಭಾಷಣೆ ಶಿವಾನಂದ್,  ಸಂಕಲನ ಆದಿತ್ಯ ಕುಣಿಗಲ್ ಅವರದಾಗಿದೆ.

Leave a Comment