ಬಾಂಗ್ಲಾ ವಲಸಿಗರ ಗುಂಡಿಕ್ಕಿ ಕೊಲ್ಲಿ: ಸಿಂಗ್

ನವದೆಹಲಿ, ಆ. ೧: ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾ ಮುಸ್ಲೀಮರು ದೇಶಕ್ಕೆ ಅಪಾಯಕಾರಿಯಾದ್ದರಿಂದ, ಈ ಅಕ್ರಮ ವಲಸಿಗರು ಅವರಾಗಿಯೇ ದೇಶ ಬಿಟ್ಟು ಹೊರಹೋಗದಿದ್ದರೆ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಬಿಜೆಪಿ ಶಾಸಕ ತೆಲಂಗಾಣದ ರಾಜಾ ಸಿಂಗ್ ಗುಡುಗಿದ್ದಾರೆ.
ಅಸ್ಸಾಂಗೆ ಒಳ ನುಸುಳಿರುವ ಅಕ್ರಮ ಬಾಂಗ್ಲಾ ದೇಶಿ ವಲಸಿಗರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ರಕ್ಷಿಸಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ರಾಜಾ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ವಿದೇಶಿಯರನ್ನು ನಮ್ಮ ದೇಶದಲ್ಲಿ ಇಟ್ಟುಕೊಳ್ಳಲು ಹೇಗೆ ಸಾಧ್ಯ? ಆ ಕ್ರಿಮಿಗಳನ್ನು ನಮ್ಮ ದೇಶದಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ಸುದ್ದಿ ಸಂಸ್ಥೆಯೊಂದಿಗೆ ಅವರು ಮಾತನಾಡಿದ್ದಾರೆ. ಈ ಮುನ್ನ ಅವರು ಈ ಕುರಿತು ವೀಡಿಯೋ ಸಂದೇಶವೊಂದನ್ನು ತಮ್ಮ ಸಾಮಾಜಿಕ ಜಾಲ ತಾಣದಲ್ಲೂ ಹರಿಬಿಟ್ಟಿದ್ದಾರೆ.
‘ವಿದೇಶಿಯರನ್ನೆಲ್ಲ ದೇಶದಿಂದ ಹೊರಗೆ ಕಳುಹಿಸಬೇಕೆಂದು ಕೇಂದ್ರವನ್ನು ನಾನು ಕೋರುತ್ತೇನೆ. ಇಲ್ಲವಾದಲ್ಲಿ ಅವರು ಮಾಡಿದಂತೆಯೇ ಇತರ ದೇಶಗಳಲ್ಲಿ ಅಕ್ರಮ ನುಸುಳುಕೋರರನ್ನು ಗುಂಡಿಕ್ಕಿ ಕೊಲ್ಲುವಂತೆಯೇ ನಮ್ಮ ದೇಶದಲ್ಲೂ ಎಲ್ಲೆಲ್ಲಿ ರೋಹಿಂಗ್ಯಾ ಅಥವಾ ಬಾಂಗ್ಲಾ ದೇಶೀಯರು ಕಾಣುವರೋ ಅಲ್ಲೆಲ್ಲಾ ಅವರಾಗಿಯೇ ಶಾಂತಿಯುತವಾಗಿ ದೇಶ ಬಿಟ್ಟು ಹೊರ ಹೋಗದಿದ್ದರೆ ಅವರೆಲ್ಲರನ್ನೂ ಗುಂಡಿಕ್ಕಿ ಕೊಲ್ಲಬೇಕು’ ಎಂದು ಸಿಂಗ್ ಪ್ರತಿಪಾದಿಸಿದ್ದಾರೆ.

Leave a Comment