ಬಹುರೂಪಿ ಚಲನಚಿತ್ರೋತ್ಸವಕ್ಕೆ ಚಾಲನೆ

ಮೈಸೂರು.ಜ.12- ಮೈಸೂರಿನ ಕಲಾಮಂದಿರದ ಆವರಣದಲ್ಲಿ ರಂಗಾಯಣ ವತಿಯಿಂದ ಆಯೋಜಿಸಲಾಗಿದ್ದ ಬಹುರೂಪಿ ಚಲನಚಿತ್ರೋತ್ಸವಕ್ಕೆ ಹಿರಿಯ ನಟ ರಮೇಶ್ ಭಟ್ ಇಂದು ಬೆಳಿಗ್ಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ರಮೇಶ್ ಭಟ್ ಇಂದಿನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಚಲನಚಿತ್ರಗಳು ಚಲನಚಿತ್ರ ಪ್ರೇಮಿಗಳ ಮನಸ್ಸನ್ನು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿ ಪ್ರದರ್ಶನಗೊಳ್ಳುವ ಚಲನಚಿತ್ರಗಳಲ್ಲಿ ನೈಜಕತೆ ಎದ್ದು ಕಾಣುತ್ತದೆ. ನಿತ್ಯ ಜೀವನದಲ್ಲಿ ಆಗು-ಹೋಗುಗಳನ್ನು ಬಿಂಬಿಸುವ ಚಲನ ಚಿತ್ರಗಳಿದ್ದು ಇವುಗಳನ್ನು ವೀಕ್ಷಿಸುವುದಕ್ಕೆ ಒಂದು ಉತ್ತಮ ಅವಕಾಶವನ್ನು ರಂಗಾಯಣವು ಕಲ್ಪಿಸಿಕೊಟ್ಟಿರುವುದಕ್ಕೆ ತಮ್ಮ ಕೃತಜ್ಞತೆಗಳನ್ನು ತಿಳಿಸಿ ಚಲನ ಚಿತ್ರೋತ್ಸವವು ಯಸಸ್ವಿಯಾಗಲೆಂದು ಶುಭ ಹಾರೈಸಿದರು.
ಇದೇ ಸಂಧರ್ಭದಲ್ಲಿ ಮತ್ತೊಂದು ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ಬಹುರೂಪಿ ನಾಟಕೋತ್ಸವಕ್ಕೆ ಹಿರಿಯ ರಂಗಕರ್ಮಿ ಪ್ರಸನ್ನ ಚಾಲನೆ ನೀಡಿದರು. ಲಿಂಗ ಸಮಾನತೆಯ ಪರಿಕಲ್ಪನೆಯಡಿ ಈ ನಾಟಕೋತ್ಸವವನ್ನು ಆಯೋಜಿಸಲಾಗಿದ್ದು ನಾಟಕ ಪ್ರೇಮಿಗಳು ಈ ನಾಟಕವನ್ನು ವೀಕ್ಷಿಸುವಂತೆ ಮನವಿ ಮಾಡಿದರು.
ಇವೆರಡೂ ಕಾರ್ಯಕ್ರಮಗಳೋಂದಿಗೆ ಚಲನಚಿತ್ರೋತ್ಸವದ ಅಂಗವಾಗಿ ವಿಚಾರ ಸಂಕಿರಣ ಚಿತ್ರಕಲಾ ಪ್ರದರ್ಶನ, ಭಿತ್ತಿ ಪತ್ರ ಪ್ರದರ್ಶನ, ಪುಸ್ತಕ ಮೇಳ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂಧರ್ಭದಲ್ಲಿ ಚಲನಚಿತ್ರ ತಜ್ಞ ವಿದ್ಯಾಶಂಕರ್, ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Leave a Comment