ಬಹುಮತ ಸಾಬೀತಿಗೆ ಸೂಚಿಸುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಎತ್ತಿದ ಕ್ರೀಯಾಲೋಪದ ಹಿನ್ನಲೆಯಲ್ಲಿ ಇಂದು ನಡೆದ ವಿಧಾನಮಂಡಲ ಅಧಿವೇಶನ ದೋಸ್ತಿಗಳು ಬಹುಮತ ಸಾಬೀತಿಗೆ ತಡೆಯಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ, 24 ಗಂಟೆಯಲ್ಲಿ ಬಹುಮತ ಸಾಬೀತು ಪಡಿಸಲು ಸೂಚಿಸುವಂತೆ ಮನವಿ ಮಾಡಿದೆ.

ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾದ ಹಿನ್ನಲೆಯಲ್ಲಿ ಇದೀಗ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಸದನದಲ್ಲಿ ವಿಶ್ವಾಸಮತ ಸಾಭೀತು ಪಡಿಸುವ ವಿಷಯವನ್ನು ಬಿಟ್ಟು, ಮಾಜಿ ಸಿಎಂ ಸಿದ್ದರಾಮಯ್ಯ ಎತ್ತಿದ ಕ್ರಿಯಾಲೋಪ ವಿಚಾರದಿಂದ ಸ್ಪೀಕರ್ ರಮೇಶ್ ಕುಮಾರ್ ಅಡ್ವಕೇಟ್ ಜನರಲ್ ಉದಯ್ ಹೊಳ್ಳ ಅವರನ್ನು ಭೇಟಿಯಾಗಿ ಸಲಹೆ ಪಡೆದರು.

ಸ್ಪೀಕರ್ ಅವರ ನಡೆಯನ್ನು ಪ್ರತಿಭಟಿಸಿದ ಬಿಜೆಪಿ, ವಿಧಾನಸಭೆಯ ಕಲಪಾದಲ್ಲಿ ಗದ್ದಲ ಕೋಲಾಹಲವನ್ನು ನಡೆಸಿತು. ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್ ಸದನವನ್ನು ಅರ್ಧಗಂಟೆಗೆ ಮುಂದೂಡಿದರು. ಆದರೇ ಈ ಸಮಯದಲ್ಲಿ ಬಿಜೆಪಿಯ ಎಂ.ಎಲ್.ಸಿ ರವಿಕುಮಾರ್, ಅರವಿಂದ ಲಿಂಬಾವಳಿ, ಮಾಜಿ ಸಿಎಂ ಜಗದೀಶ್ ಶೆಟ್ಟ ಮತ್ತು ಇತರರನ್ನು ಒಳಗೊಂಡ ಬಿಜೆಪಿ ನಿಯೋಗ ರಾಜ್ಯಪಾರನ್ನು ಭೇಟಿ ಮಾಡಿತು.

ರಾಜ್ಯಪಾಲ ವಜುಭಾಯಿ ವಾಲ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ, 24 ಗಂಟೆಯಲ್ಲಿ ಮೈತ್ರಿ ಸರ್ಕಾರ ಬಹುಮತ ಸಾಭೀತುಪಡಿಸುವಂತೆ ಸೂಚಿಸಬೇಕು. ಈ ಮೂಲಕ ತಾವು ಮಧ್ಯಪ್ರವೇಶಿಸಿ ಅಲ್ಪಮತಕ್ಕೆ ಕುಸಿದಿರುವ ಸರ್ಕಾರಕ್ಕೆ ಬಹುಮತ ಸಾಭೀತಿಗೆ ಸೂಚಿಸಬೇಕು ಎಂದು ಮನವಿ ಮಾಡಿತು.

ಈ ಹಿನ್ನಲೆಯಲ್ಲಿ ರಾಜಭವನದ ಕಾರ್ಯದರ್ಶಿಯವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿದ್ದು, ಇದೀಗ ರಾಜಕೀಯ ನಡೆ ಕುತೂಹಲ ಮೂಡಿಸಿದೆ. ಅಲ್ಲದೇ ಸ್ಪೀಕರ್ ಮತ್ತು ಸುಪ್ರೀಂ ಕೋರ್ಟ್ ನಡುವ ನಡೆಯುತ್ತಿದ್ದ ಸಮರ ಇದೀಗ, ಸ್ಪೀಕರ್ ಮತ್ತು ರಾಜ್ಯಪಾಲರ ನಡುವೆಯೂ ಶುರುವಾಗುವ ಲಕ್ಷಣ ಕಂಡುಬಲುತ್ತಿದೆ. ಅಲ್ಲದೇ ರಾಜ್ಯ ರಾಜಕೀಯದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಿಸುಂವತಾಗಿದೆ.

Leave a Comment