ಬಹಮನಿ ಆಡಳಿತ ಸಾಮರಸ್ಯ ವಿಚಾರಸಂಕಿರಣ 3 ರಂದು

ಕಲಬುರಗಿ ಆ 1: ಬಹಮನಿ ಆಡಳಿತದಲ್ಲಿ ಸಾಮಾಜಿಕ ಸಾಮರಸ್ಯದ ಕೊಡುಗೆ ಕುರಿತು ವಿಚಾರ ಸಂಕಿರಣವನ್ನು ಆ.3 ರಂದು ಮಧ್ಯಾಹ್ನ 4 ಗಂಟೆಗೆ ನಗರದ ಮುಖ್ಯ ರಸ್ತೆ ಗೋಲ್ಡ್ ಹಬ್ ಹತ್ತಿರವಿರುವ ಅಂಜುಮನ್ ತರಖ್ಖಿ ಎ ಉರ್ದು ಹಿಂದ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಹೈಕ ಜನಪರ ಸಂಘರ್ಷ ಸಮಿತಿ ಮತ್ತು ಅಂಜುಮನ್ ತರಖ್ಖಿ ಎ ಉರ್ದು ಹಿಂದ್ ಸಹಯೋಗದಲ್ಲಿ ಏರ್ಪಡಿಸಲಾದ ಕಾರ್ಯಕ್ರಮವನ್ನು ಸಿಯುಕೆ ಕುಲಪತಿ ಪ್ರೊ ಎಚ್ ಎಂ ಮಹೇಶ್ವರಯ್ಯ ಉದ್ಘಾಟಿಸುವರು ಎಂದು ಸಂಯೋಜಕ ಬಸವರಾಜ ಚಿಡಗುಂಪಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಹೈಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ,ಸಿಯುಕೆ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಮೊಹಮ್ಮದ್ ನಜರುಲ್ ಬಾರಿ ಮತ್ತು ಕರ್ನಾಟಕಉರ್ದು ಅಕಾಡೆಮಿ ಮಾಜಿ ಅಧ್ಯಕ್ಷ ಡಾ ವಹಾಬ ಅಂದಲೀಬ್ ಆಗಮಿಸುವರು.ಅಂಜುಮನ್ ತರಖ್ಖಿ ಎ ಉರ್ದು ಹಿಂದ್ ಕಲಬುರಗಿ ಘಟಕದ ಅಧ್ಯಕ್ಷ ಅಮ್ಜದ್ ಜಾವೀದ್ ಅಧ್ಯಕ್ಷತೆ ವಹಿಸುವರು ಎಂದರು..

Leave a Comment