ಬಸ್ ಲಾರಿ ಡಿಕ್ಕಿ: 12 ಜನರಿಗೆ ಗಾಯ

ಕಲಬುರಗಿ ಫೆ 13: ಲಾರಿ ಮತ್ತು ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿ 12 ಜನ ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಶಹಾಪುರ ತಾಲೂಕಿನ ಮದ್ದರಕಿ ಹತ್ತಿರ ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಭವಿಸಿದೆ.

ಘಟನೆಯಲ್ಲಿ  ಒಂದು ಮಗು ಸೇರಿದಂತೆ ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಕಲಬುರಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಬಸ್ ಚಾಲಕ ಪ್ರಭು ಬಸಲಿಂಗಪ್ಪ, ಪ್ರಯಾಣಿಕರಾದ  ಸುನೀತಾ,ವೈಷ್ಣವಿ, ಸುನೀತಾ ಎಂ, ಮಾನಪ್ಪ, ಬಲಭೀಮ,ಅಯ್ಯಪ್ಪ,ಮಲ್ಲಿಕಾರ್ಜುನ, ಲಕ್ಷ್ಮೀ, ಸತೀಶ, ಮಹ್ಮದ್ ಶಬ್ಬೀರ, ಸಿದ್ದಕಿ ಎಂಬುವವರು  ಗಾಯಗೊಂಡಿದ್ದಾರೆ.

ಸಾರಿಗೆ ಬಸ್ಸು ಶಹಾಪುರದಿಂದ ಕಲಬುರಗಿ ಕಡೆಗೆ ಹೊರಟಿತ್ತು.ಭೀಮರಾಯನ ಗುಡಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Leave a Comment