ಬಸ್ ಮರಕ್ಕೆ ಡಿಕ್ಕಿ ಮೂವರಿಗೆ ಗಾಯ

ಬೆಂಗಳೂರು,ಡಿ.೭-ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಮೂವರು ಗಾಯಗೊಂಡ ಘಟನೆ ಜಯನಗರ ೪೬ನೇ ಕ್ರಾಸ್‌ನ ರಾಜಲಕ್ಷ್ಮೀ ಬಡಾವಣೆಯ ಬಳಿ ನಡೆದಿದೆ.
ಬನಶಂಕರಿ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುತ್ತಿದ್ದ ಬಿಎಂಟಿಎಸ್ ಬಸ್ (ಏಂ೦೧ ಈಂ ೧೪೯೨) ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ಮರಕ್ಕೆ ವೇಗವಾಗಿ ಡಿಕ್ಕಿ ಹೊಡೆದು ಬಸ್‌ನಲ್ಲಿದ್ದ ಸುಮಾರು ೩೦ ಮಂದಿ ಪ್ರಯಾಣಿಕರ ಪೈಕಿ ಮೂವರಿಗೆ ಗಾಯವಾಗಿದೆ.
ಮೂವರಲ್ಲಿ ಸ್ನೇಹ ಎಂಬ ಯುವತಿಗೆ ತಲೆಗೆ ಗಂಭೀರ ಗಾಯವಾಗಿದ್ದು, ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತಿಬ್ಬರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಅಪಘಾತಕ್ಕೆ ಬಸ್‌ನ ಗಾಜು ಪುಡಿ ಪುಡಿಯಾಗಿದೆ ಎಂದು ಜಯನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

Leave a Comment