ಬಸ್ ನಲ್ಲಿ ಚೈನ್, ನಗದು ಕಳ್ಳತನ

ಹುಬ್ಬಳ್ಳಿ,ಫೆ.12- ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವಳ ಬ್ಯಾಗ್ ನಲ್ಲಿದ್ದ ಬಂಗಾರದ ಚೈನ್ ಹಾಗೂ ನಗದು ದೋಚಿ ಕಳ್ಳರು ಪರಾರಿಯಾದ ಘಟನೆ ನಗರದ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಬೈರಿದೇವರಕೊಪ್ಪದ ರೇಖಾ ಪ್ರಭಾಕರ ನೇತ್ರಾಣಿ ಎಂಬುವರು ತಮ್ಮ ಮಗಳು ಪೂಜಾಳೊಂದಿಗೆ ನಗರಕ್ಕೆ ಬಸ್ ನಲ್ಲಿ ಆಗಮಿಸುತ್ತಿದ್ದಾಗ ಅವರ ವ್ಯಾನಿಟಿ ಬ್ಯಾಗದಲ್ಲಿ 18 ಗ್ರಾಂ. ಚಿನ್ನದ ಚೈನ್ ಹಾಗೂ 5 ಸಾವಿರ ರೂ. ನಗದನ್ನು ಜೇಬುಗಳ್ಳರು ಕದ್ದು ಪರಾರಿಯಾಗಿದ್ದಾರೆ.
ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Comment