ಬಸ್ ಕಂಡಕ್ಚರ್-ಕ್ಲೀನರ್ ಮೇಲೆ ಹಲ್ಲೆ

ಮಧುಗಿರಿ, ಜೂ. ೧೮- ಹಳೆಯ ದ್ವೇಷದ ಹಿನ್ನೆಲೆಯಲ್ಲಿ 10 ಜನರ ಗುಂಪು ಖಾಸಗಿ ಬಸ್ ಕಂಡಕ್ಟರ್ ಮತ್ತು ಕ್ಲೀನರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಕಂಡಕ್ಟರ್ ಶ್ರೀನಿವಾಸ್ ಮತ್ತು ಕ್ಲೀನರ್ ಅಭಿಲಾಷ್ ಎಂಬುವರೇ ಗಾಯಗೊಂಡಿರುವವರು. ಪಟ್ಟಣದ ಉಪವಿಭಾಗ ಕಛೇರಿ ಮುಂದೆ ಇದ್ದಕ್ಕಿದ್ದಂತೆ 10 ಜನರ ತಂಡ ಮಾರಕಾಸ್ತ್ರಗಳ ಸಮೇತ ಬಂದಿದ್ದಾರೆ. ಇವರಲ್ಲಿ ಆಟೋ ಗಿರಿ ಮತ್ತು ಉಮೇಶ್ ಎಂಬುವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದೇ ವೇಳೆ ಬಂದ ಪೊಲೀಸ್ ಜೀಪ್ ಕಂಡು ಹಲ್ಲೆಕೋರರು ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಮಧುಗಿರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Leave a Comment