ಬಸ್-ಇನೋವಾ ವಾಹನ ಮಧ್ಯೆ ಭೀಕರ ರಸ್ತೆ ಅಪಘಾತ

ರಾಯಚೂರು.ಜು.11- ರಾಯಚೂರು-ಮಾನ್ವಿ ರಸ್ತೆಯಲ್ಲಿ ಬೈಲ್ ಮರ್ಚೆಡ್ ಹತ್ತಿರ ಬಸ್ ಮತ್ತು ಇನೋವಾ ವಾಹನ ಮಧ್ಯೆ ಮುಖಾಮುಖಿ ಭೀಕರ ರಸ್ತೆ ಅಪಘಾತದಲ್ಲಿ ಅನೇಕರಿಗೆ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿದ ಮಾಹಿತಿಯಿಲ್ಲ.
ಸಾರಿಗೆ ಇಲಾಖೆ ಕೆಎ 36 ಎಫ್ 303 ಬಸ್ ಮತ್ತು ಜಿ.ಮಲ್ಲಿಕಾರ್ಜುನ ಎಂಬುವವರಿಗೆ ಸೇರಿದ ಕೆಎ 1 ಎಂಪಿ 7254 ಇನೋವಾ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇನೋವಾ ವಾಹನ ಮುಂಭಾಗ ಸಂಪೂರ್ಣ ಜಜ್ಜಿ ಹೋಗಿದೆ. ಅಪಘಾತದ ಒಡೆತಕ್ಕೆ ಸಾರಿಗೆ ಬಸ್ ಪಕ್ಕದಲ್ಲಿರುವ ಗದ್ದೆಯಲ್ಲಿ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಭಾರೀ ಅಪಘಾತ ಮಧ್ಯೆಯೂ ಯಾವುದೇ ವ್ಯಕ್ತಿ ಪ್ರಾಣಾಪಾಯಕ್ಕೆ ಗುರಿಯಾಗಿರುವ ಘಟನೆಗಳಿಲ್ಲ.
ಸಾರಿಗೆ ಬಸ್ ಉರುಳಿದ ಹಿನ್ನೆಲೆಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಗಾಯಗಳಾಗಿವೆ. ಈ ರಸ್ತೆಯಲ್ಲಿ ಓಡಾಡುವ ಜನರೇ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಹೊರ ಬರುವಂತೆ ಮಾಡಿ, ಅವರ ಸಾಮಾನು, ಸರಂಜಾಮು ಹೊರ ತೆಗೆದರು. ಕೂಡ್ಲಿಗಿಯಿಂದ ರಾಯಚೂರಿನತ್ತ ಸಾರಿಗೆ ಬಸ್ ಪ್ರಯಾಣಿಸುತ್ತಿತ್ತು. ಇನೋವಾ ವಾಹನ ರಾಯಚೂರಿನಿಂದ ಸಿಂಧನೂರಿನತ್ತ ತೆರಳುತ್ತಿತ್ತು.
ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ಎದುರುಗಡೆಯಿಂದ ಬಸ್ ಬಂದ ಪರಿಣಾಮ ಇನೋವಾ ಮತ್ತು ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇನೋವಾ ವಾಹನ ರಕ್ಷಣೆಯಲ್ಲಿ ಸಾರಿಗೆ ಬಸ್ ಪಕ್ಕದ ಗದ್ದೆಗೆ ನುಗ್ಗಿದ ಕಾರಣ ಉರುಳಿ ಬಿದ್ದಿದೆಂದು ಸ್ಥಳೀಯರೊಬ್ಬರ ಹೇಳಿಕೆಯಾಗಿದೆ.

Leave a Comment