ಬಸ್ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿ ಅ ೯ – ಅವ್ಯವಸ್ಥಿತ ಬಸ್ ಸೌಕರ್ಯ ಖಂಡಿಸಿ ವಿದ್ಯಾರ್ಥಿಗಳು   ಬಸ್ ತಡೆದು  ಪ್ರತಿಭಟನೆ ಮಾಡಿದ ಘಟನೆ   ತಾಲೂಕಿನ  ಇಂಗಳಗಿ  ಗ್ರಾಮದಲ್ಲಿ ನಡೆದಿದೆ.
ಗ್ರಾಮಕ್ಕೆ ಸರಿಯಾದ ಸಮಯಕ್ಕೆ  ಬಸ್ ಬಾರದ ಹಿನ್ನೆಲೆಯಲ್ಲಿ  ಸರಿಯಾದ ವೇಳೆಗೆ  ಶಾಲಾ ಕಾಲೇಜಿಗೆ ತೆರಳಲು ಸಾಧ್ಯವಾಗದೆ ಕೆಂಗಟ್ಟ ವಿದ್ಯಾರ್ಥಿಗಳು ಸರಿಯಾಗಿ ಸಮಯಕ್ಕೆ  ಬಸ್ ಬಿಡುವಂತೆ  ಒತ್ತಾಯಿಸಿ ಪ್ರತಿಭಟಿಸಿದರು.
ತಕ್ಷಣವೇ ಸಂಬಂಧಿಸಿದ  ಅಧಿಕಾರಿಗಳು  ಸಾರಿಗೆ ಬಸ್  ವ್ಯವಸ್ಥೆ ಕಲ್ಪಿಸುವಂತೆ  ಆಗ್ರಹಿಸಿದರು. ಈ ವೇಳೆಯಲ್ಲಿ  ವಾಯುವ್ಯ ಸಾರಿಗೆ ಹಾಗೂ ಪ್ರತಿಭಟನಾಕಾರರ ಮಧ್ಯ  ಮಾತಿನ ಚಕಮಕಿ ನಡೆದು  ಸರಿಯಾದ ಸಮಯಕ್ಕೆ  ಬಸ್ ಬಿಡದೇ ಹೋದ್ರೆ  ನಿರಂತರ ಹೋರಾಟ ಮಾಡುವುದಾಗಿ  ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಎಚ್ಚರಿಕೆ   ನೀಡಿದ್ದಾರೆ.

Leave a Comment