ಬಸ್‌ನಲ್ಲಿ ಸರ ಕದಿಯಲು ಯತ್ನಿಸಿ ಪೊಲೀಸರ ಅತಿಥಿಯಾದರು!

ಕುಣಿಗಲ್, ಜೂ. ೧೮- ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕದಿಯಲು ಯತ್ನಿಸಿ ಮೂವರು ಮಹಿಳೆಯರು ಪೊಲೀಸ ಅತಿಥಿಯಾಗಿರುವ ಘಟನೆ ಇಲ್ಲಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಡೆದಿದೆ.

ಮದ್ದೂರು ಕಡೆಯಿಂದ ಕುಣಿಗಲ್ ಕಡೆಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಮೂವರು ಮಹಿಳೆಯರು ಈ ಕೃತ್ಯವೆಸಗಲು ಯತ್ನಿಸಿದ್ದಾರೆ. ಇದೇ ವೇಳೆ ಸಿಕ್ಕ ಒಬ್ಬ ಮಹಿಳೆಯನ್ನು ಹಿಡಿದು ಮಹಿಳೆಯರೇ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನಿಬ್ಬರ ಮಾಹಿತಿಯನ್ನು ಸೆರೆ ಸಿಕ್ಕ ಮಹಿಳೆಯಿಂದ ಪಡೆದು ಮಂಡೀಗುಡ್ಡೆಯ ಕಡೆ ಪರಾರಿಯಾಗುತ್ತಿದ್ದ ಅವರನ್ನೂ ಹಿಡಿದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹುಲಿಯೂರುದುರ್ಗ ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment