ಬಸ್ರೂರು ಸುತ್ತಮುತ್ತ ಗೋಕಳ್ಳತನ

ಮೌನಕ್ಕೆ ಶರಣಾದ ಪೊಲೀಸರು!
ಉಡುಪಿ, ಆ.೭- ಉಡುಪಿ ಜಿಲ್ಲೆಯ ಕುಂದಾಪುರ, ಬಸ್ರೂರು ಸುತ್ತಮುತ್ತ ಗೋಕಳ್ಳರು ಪ್ರತಿನಿತ್ಯ ಬೀಡಾಡಿ ಗೋವುಗಳನ್ನು ಕಾರ್, ಟೆಂಪೋಗಳಲ್ಲಿ ತುಂಬಿಸಿ ಕಸಾಯಿಖಾನೆಗೆ ಸಾಗಿಸುತ್ತಿದ್ದರೂ ಪೊಲೀಸರು ಮೌನವಾಗಿರುವ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ನಿನ್ನೆ ಮಧ್ಯರಾತ್ರಿ ಬಸ್ರೂರಿನ ಪೆಟ್ರೋಲ್ ಪಂಪ್ ಬಳಿ ದನಗಳ್ಳತನ ಮಾಡುತ್ತಿದ್ದ ವಿದ್ಯಾಮಾನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕುಂದಾಪುರ, ಬಸ್ರೂರಿನ ಸುತ್ತಮುತ್ತ ರಾತ್ರಿ ವೇಳೆಯಲ್ಲಿ ಮಾರುತಿ ರಿಟ್ಝ್, ಸ್ವಿಫ್ಟ್ ಕಾರಿನಲ್ಲಿ ಆಗಮಿಸಿದ ಕಳ್ಳರ ತಂಡ ರಸ್ತೆ ಬದಿಯಲ್ಲಿ ಮಲಗಿದ್ದ ದನಗಳನ್ನು ಹಿಡಿದು ಕಳವು ಮಾಡುತ್ತಿದ್ದು, ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಮುಸುಕುಧಾರಿಗಳಾಗಿರುವ ನಾಲ್ವರ ತಂಡ ನಡೆಸುತ್ತಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರು ಮತ್ತು ಉಡುಪಿ ನೋಂದಣಿಯ ಕಾರ್‌ಗಳಲ್ಲಿ ಗೋಕಳ್ಳರು ಬರುತ್ತಿದ್ದು ಕೃತ್ಯವೆಸಗಿದ ಬಳಿಕ ಕಾರಿನಲ್ಲೇ ಪರಾರಿಯಾಗುತ್ತಿದ್ದಾರೆ. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಬರುಗಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

Leave a Comment