ಬಸವ ಭವನ ಇಲ್ಲವೋ ಕಾಂಗ್ರೆಸ್ ಕಚೇರಿಯೋ ಗೊತ್ತಿಲ್ಲ

ಕಿಡಿಕಾರಿದ ಶಾಸಕ ಹರ್ಷವರ್ಧನ್
ನಂಜನಗೂಡು. ಅ.15- ನಿನ್ನೆ ಮಾಜಿ ಸಚಿವ ಡಾಕ್ಟರ್ ಎಚ್ ಸಿ ಮಾದೇವಪ್ಪ ನಂಜನಗೂಡಿನಲ್ಲಿ ನಿರ್ಮಾಣವಾಗುತ್ತಿರುವ ಬಸವ ಭವನ ಕಾಮಗಾರಿಯನ್ನು ಪರಿಶೀಲಿಸಿದರು. ಇದರ ಬಗ್ಗೆ ಪತ್ರಕರ್ತರು ಕೇಳಿದಾಗ ಅವರು ಹಿರಿಯರು ಸಿದ್ದರಾಮಯ್ಯನ ಕಾಲದಲ್ಲಿ ಎರಡು ಕೋಟೆ ಹಣ ಬಿಡುಗಡೆಯಾಗಿ ಮಾಡಿರುವುದು. ಸರಿಯಷ್ಟೇ ಇದು ಒಳ್ಳೆಯ ಕೆಲಸ ಮಾಡಿದ್ದಾರೆ.
ಆದರೂ ಕೂಡ ಇಲ್ಲಿ ನಾನು ಶಾಸಕ ಇರುವಾಗ ಪರಿಶೀಲಿಸುವ ಅಗತ್ಯವಿಲ್ಲ ಇದು ಬಸವ ಭವನ ಅಥವಾ ಕಾಂಗ್ರೆಸ್ ಕಚೇರಿ ಯಾವುದೆಂದು ತಿಳಿದುಕೊಂಡು ಬರುತ್ತಿದ್ದರೆ ಗೊತ್ತಿಲ್ಲ ಎಂದು ಕಿಡಿಕಾರಿದರು ನಾನಿರುವಾಗ ಕ್ಷೇತ್ರದಲ್ಲಿ ಆಗುಹೋಗುಗಳ ಬಗ್ಗೆ ನನಗೆ ಗೊತ್ತು ಇವರಿಗೆ ನಂಜನಗೂಡಿನ ಕ್ಷೇತ್ರದಲ್ಲಿ ಪ್ರೀತಿ ವಿಶ್ವಾಸ ವಿದ್ದರೆ ಮುಂದೆ ಆಗುವಂತಹ ಕೆಲಸಗಳಿಗೆ ಪತ್ರದ ಮೂಲಕ ನನಗೆ ತಿಳಿಸಿದ್ದಾರೆ ನಾನು ಮಾಡಿಕೊಡುತ್ತೇನೆ ಅದನ್ನು ಬಿಟ್ಟು ಪದೇಪದೇ ಬಂದಾಗಲೆಲ್ಲ ಬರೀ ಬಸವ ಭವನ ಮಾತ್ರ ವೀಕ್ಷಣೆ ಮಾಡುವುದು ಎಷ್ಟು ಸರಿ ಮುಂದಿನ ದಿನಗಳಲ್ಲಿ ಈ ರೀತಿ ಮಾಡಬಾರದು ಎಂದರು.
ಇವರ ಕಾಲದಲ್ಲಿ ನಂಜನಗೂಡು ಕ್ಷೇತ್ರಕ್ಕೆ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿಸಿ ರಸ್ತೆ ಕಾಮಗಾರಿ ಮಾಡಿದ್ದಾರೆ ಒಂದು ದಿನವಾದರೂ ಬಂದು ಪರಿಶೀಲಿಸಿಲ್ಲ ತರಾತುರಿ ಕೆಲಸಮಾಡಿ ಕೈತೊಳೆದುಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರ ನನಗೆ ಗೊತ್ತಿದೆ ಅಭಿವೃದ್ಧಿಪಡಿಸಲು ಅವರು ಹಿರಿಯರು ತಿಳಿದುಕೊಳ್ಳುತ್ತಾರೆ ಎಂದು ನಂಬಿದ್ದೇನೆ ನಾನು ಕೂಡ ಬಸವ ಭವನಕ್ಕೆ ಹೆಚ್ಚಿನ ಕಾಮಗಾರಿಗೆ ಹಣ ಬಿಡುಗಡೆ ಮಾಡಿಸುತ್ತೇನೆ ಎಂದರು
12 ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆ ಬಗ್ಗೆ ಕೇಳಿದಾಗ 10 ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲುವು ದಲ್ಲಿ ಅನುಮಾನ ಬೇಡ ಎಂದರು.

Leave a Comment