ಬಸವ ಜಯಂತಿ ರದ್ದು

 

ಕಲಬುರಗಿ,ಏ.2-ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬಸವ ಜಯಂತಿಯನ್ನು ಆಚರಿಸದೆ ರದ್ದು ಪಡಿಸಲು ನಿರ್ಧರಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ.ಶರಣ ಪಾಟೀಲ ತಿಳಿಸಿದ್ದಾರೆ.

ಇದೇ ತಿಂಗಳ 26 ರಂದು 887ನೇ ಬಸವ ಜಯಂತಿ ಆಚರಿಸಬೇಕಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮಠಾಧೀಶರ, ಸಮಾಜದ ಮುಖಂಡರ, ಹಿರಿಯರ ಹಾಗೂ ಕಾರ್ಯಕಾರಣಿಯೊಂದಿಗೆ ಚರ್ಚಿಸಿ, ಸಲಹೆ ಪಡೆದು ಜಯಂತಿಯನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಇಲ್ಲವೇ ಮುಂದಿನ ವರ್ಷ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದೆ. ಕೊರೊನಾ ಸಂಪೂರ್ಣವಾಗಿ ನಿಯಂತ್ರಣಗೊಳ್ಳಲಿ ಎಂಬುವುದು ಮಹಾಸಭಾದ ಬಯೆಕೆಯಾಗಿದ್ದು, ಹೀಗಾಗಿ ಪ್ರಸಕ್ತ ವರ್ಷ ಬಸವ ಜಯಂತಿಯನ್ನು ಜಿಲ್ಲಾಡಳಿತವೇ ಸಾಂಕೇತಿಕವಾಗಿ ಆಚರಿಸಲಿ ಮತ್ತು ಜಯಂತಿಗೆಂದು ಸರ್ಕಾರ ನೀಡುವ ಅನುದಾನವನ್ನು ಕೋವಿಡ್-19 ನಿಯಂತ್ರಣಕ್ಕೆ ಉಪಯೋಗಿಸಬೇಕು ಎಂದು ಮನವಿ ಮಾಡಿದ್ದಾರೆ.

Leave a Comment