ಬಸವೇಶ್ವರ ಆಸ್ಪತ್ರೆ: “ಅಪರೂಪದ ಸಂಕೀರ್ಣಮಯ ಶಸ್ತ್ರ ಚಿಕಿತ್ಸೆ ಯಶಸ್ವಿ”

 

ಕಲಬುರಗಿ,ಜೂ.15- ಮೂತ್ರಕೋಶ ಹಾಗೂ ದೊಡ್ಡ ಕರುಳಿನ ಸೊಂಕಿತ ಭಾಗವನ್ನು ಪಿಸ್ಟುಲಾ(ಈISಖಿUಐಂ) ಸಮೇತವಾಗಿ ಶಸ್ತ್ರ ಚಿಕಿತ್ಸೆ ಮಾಡಿ ತೆಗೆದು ಹಾಕಲಾಯಿತು ಮತ್ತು ಮರುಜೋಡಣೆ ಮಾಡಲಾಯಿತು. ಶಸ್ರಚಿಕಿತ್ಸೆಯ ನಂತರ ರೋಗಿ ಶಿವರಾಜನ ಮೂತ್ರವಿಸರ್ಜನೆಯಲ್ಲುಂಟಾದ ಸಮಸ್ಯೆ ಸಂಪೂರ್ಣವಾಗಿ ಗುಣವಾಗಿದೆ. ಆರೋಗ್ಯದಲ್ಲಿ ಸುದಾರಣೆ ಕಂಡುಬಂದಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಡಾ||ಎಸ್.ಶರದ್.ತಂಗಾ, ಡಾ||ಉಮೇಶಚಂದ.್ರಡಿ.ಜಿ ಹಾಗೂ ಡಾ|| ಮಲ್ಲಿಕಾರ್ಜುನ ತೆಗನೂರ ತಿಳಿಸಿದ್ದಾರೆ.

58 ವರ್ಷದ ಶಿವರಾಜ, ಮು.ಪರತಾಪೂರ, ತಾ.ಬಸವಕಲ್ಯಾಣ,ಜಿ.ಬೀದರ ನಿವಾಸಿ ಆಗಿರುವ ವ್ಯಕ್ತಿಯ ಮೂತ್ರವಿಸರ್eನೆಯಲ್ಲಿ ಕಳೆದ 6 ತಿಂಗಳಿಂದ ಹಳದಿ ಬಣ್ಣದ ಕಣಗಳು ವಿಸರ್ಜನೆ ಆಗುತ್ತಿವೆ ಎನ್ನುವ ದೂರಿನೊಂದಿಗೆ ಬಸವೇಶ್ವರ ಭೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆ, ಕಲಬುರಗಿಯ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಲಾಯಿತು.

ಅಧಿಕ ರಕ್ತದೊತ್ತಡ,ಮಧುಮೇಹ ಹಾಗೂ ಹೃದಯ ಸಂಬಂದೀ ಶಸ್ತ್ರ ಚಿಕಿತ್ಸೆ ಆಗಿರುವ ಹಿನ್ನೆಲೆಯನ್ನುಳ್ಳುವನಾಗಿದ್ದನು. ರೋಗಿಯನ್ನು ಸಿಟಿ ಸ್ಕ್ಯಾನ್ ಮತ್ತು ಕೋಲೋನೋಸ್ಕೋಪಿ (ಛಿoಟoಟಿosಛಿoಠಿಥಿ)óóóóಪರೀಕ್ಷೆಗೆ ಒಳಪಡಿಸಿದಾಗ ರೋಗಿಯ ಮೂತ್ರಕೋಶ ಹಾಗೂ ಕಲ್ಮಶ ದ್ವಾರದ (ಗುದ ದ್ವಾರ) ನಾಳಗಳ ನಡುವೆ ಸಂಪರ್ಕ ಆಗಿರುವದು ಕಂಡು ಬಂದಿತು.ಈ ರೀತಿ ಎರಡು ಅಂಗಗಳ ಅಥವಾ ನಾಳಗಳ ನಡುವೆ ಗೆರೆಯ ರೂಪದಲ್ಲಿ ಅನಗತ್ಯವಾಗಿ ರೂಪಗೊಳ್ಳುವದನ್ನು  ವೈದ್ಯಕೀಯ ಭಾಷೆಯಲ್ಲಿ  ಪಿಸ್ಟುಲಾ(ಈISಖಿUಐಂ)ಭಗಂದರ ಎಂದು ಕರೆಯಲಾಗುತ್ತದೆ. ಪಿಸ್ಟುಲಾದ ಪರಿಣಾಮವಾಗಿ  ಸೊಂಕು ಉಂಟಾಗಿ ,ಆ ಸೊಂಕು ಮೂತ್ರಕೋಶ ಹಾಗೂ ಕಲ್ಮಶ ದ್ವಾರದಲ್ಲುಂಟಾದ ಸಂಪರ್ಕದ ಪರಿಣಾಮವಾಗಿ ಮಲವಿಸರ್ಜನೆಯು, ಮೂತ್ರಕೋಶದ ಮೂಲಕ ಹೊರಗೆ ಬರಲಾರಂಭಿಸಿತು. ಇಂತಹ ಸಮಸ್ಯೆ 5% ಪ್ರತಿಶತ ಜನರಲ್ಲಿ ಕಂಡುಬರುವಂತಹ ಅತೀ ವಿರಳ ಖಾಯಿಲೆ ಇದಾಗಿದೆ.

ಇಂಥಹ ಅಪರೂಪದ ಸಂಕೀರ್uಮಯ ಶಸ್ತ್ರ ಚಿಕಿತ್ಸೆಯನ್ನ್ಸು ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಪ್ರಪಥಮ ಬಾರಿಗೆ ಅತ್ಯಂತ ಯಶಸ್ವಿಯಾಗಿ ಮಾಡಿರುವ ಕೀರ್ತಿ ಬಸವೇಶ್ವರ ಭೋಧನಾ ಹಾಗೂ ಸಾರ್ವಜನಿಕ ಆಸ್ಪತೆಯ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗದ ಡಾ.ವಿ.ಎಸ್.ಕಪ್ಪಿಕೇರಿ,ಡಾ.ಕೈಲಾಶ ಬನಾಳೆ,ಡಾ.ಶರಣು ರುದ್ರವಾಡಿ ಅವರಿಗೆ ಸಲ್ಲುತ್ತದೆ.  ಅರವಳಿಕೆ ವಿಭಾಗದ ಹೊಣೆಗಾರಿಕೆಯನ್ನು ಡಾ.ಗುರು ಪಾಟೀಲ್, ಡಾ.ನಂದಾ ನಂದ್ಯಾಳ ಅವರು ವಹಿಸಿಕೊಂಡು ಶಸ್ತ್ರ ಚಿಕಿತ್ಸೆಗೆ ಸಹಕರಿಸಿದರು.

ಕಲಬುರಗಿ ನಗರದಲ್ಲಿ ಪ್ರಪಥಮ ಬಾರಿಗೆ ಇಂಥಹ ಸಂಕೀರ್uಮಯ  ಶಸ್ತ್ರ ಚಿಕಿತೆಯನ್ನ್ಸು ಯಶಸ್ವಿಯಾಗಿ ಮಾಡಿದ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗದ ಡಾ.ವಿ.ಎಸ್.ಕಪ್ಪಿಕೇರಿ,ಡಾ.ಕೈಲಾಶ ಬನಾಳೆ,ಡಾ.ಶರಣು ರುದ್ರವಾಡಿ ಅವರಿಗೆ ಸಲ್ಲುತ್ತದೆ. ಅರವಳಿಕೆ ವಿಭಾಗದ ಡಾ.ಗುರು ಪಾಟೀಲ್,  ಡಾ.ನಂದಾ ನಂದ್ಯಾಳ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ .ಭೀಮಾಶಂಕರ .ಸಿ.ಬಿಲಗುಂದಿ ಮತ್ತು ಉಪಾಧ್ಯಕ್ಷರಾದ ಡಾ. ಶಿವಾನಂದ ದೇವರಮನಿ ,ಕಾರ್ಯದರ್ಶಿಗಳಾದ ನಾಗೇಂದ್ರ ಮಂಠಾಳೆ, ಎಮ್.ಆರ್.ಎಮ್.ಸಿ  ಸಂಚಾಲಕರಾದ  ಡಾ,ಸಂಪತ ಲೋಯಾ, ಬಸವೇಶ್ವರ ಆಸ್ಪತ್ರೆಯ ಸಂಚಾಲಕರಾದ ಅನುರಾಧಾ ದೇಸಾಯಿ, ಆಡಳಿತ ಮಂಡಳಿಯ ಎಲ್ಲ ಸದಸ್ಯರು ,ಮಹಾದೇವಪ್ಪಾ ರಾಂಪೂರೆ ವೈದ್ಯಕೀಯ ಮಹಾ ವಿದ್ಯಾಲಯದ ಡೀನ್ ರಾದ ಡಾ.ಉಮೇಶಚಂದ್ರ.ಡಿ.ಜಿ, ಬಸವೇಶ್ವರ ಭೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮಲ್ಲಿಕಾರ್ಜುನ ತೆಗನೂರ ,  ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಶರದ್.ತಂಗಾ ಹಾಗೂ ಆಸ್ಪತ್ರೆಯ ಎಲ್ಲ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಅಭಿನಂದಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment