ಬಸವಬೆಳಗು ಲೋಕಾರ್ಪಣೆ 24 ರಂದು

 

ಕಲಬುರಗಿ ಜ 22: ಬಸವಕಲ್ಯಾಣದ ಬಸವ ಮಹಾಮನೆ ಸಂಸ್ಥೆಯಲ್ಲಿ ಸಿದ್ಧರಾಮ ಬೆಲ್ದಾಳ ಶರಣರ 71 ನೆಯ ವರ್ಷದ ಅಭಿನಂದನ ಗ್ರಂಥ ಬಸವಬೆಳಗು ಲೋಕಾರ್ಪಣೆ ಕಾರ್ಯಕ್ರಮವನ್ನು ಜ 24 ರಂದು   ಆಯೋಜಿಸಲಾಗಿದೆ.

ಜ .24 ರಂದು ಬೆಳಿಗ್ಗೆ 11 ಗಂಟೆಗೆ  ಬಸವಬೆಳಗು ಅಭಿನಂದನ ಗ್ರಂಥ ಲೋಕಾರ್ಪಣೆ ,ಸಮಾನತಾ  ಏಕತಾ ಸಮಾವೇಶ ನಡೆಯಲಿದ್ದು,ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಾರ್ಯಕ್ರಮ ಉದ್ಘಾಟಿಸುವರು.ಮಾಜಿ ಸಚಿವರಾದ ಎಂಬಿ ಪಾಟೀಲ, ಜಿ ಪರಮೇಶ್ವರ ಸೇರಿದಂತೆ ಅನೇಕ ಗಣ್ಯರು ವಿವಿಧ ಧರ್ಮ ಗುರುಗಳು  ಪಾಲ್ಗೊಳ್ಳುವರು ಎಂದು ಸಿದ್ಧರಾಮ ಬೆಲ್ದಾಳ ಶರಣರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ಮಧ್ಯಾಹ್ನ 1 ಗಂಟೆಗೆ ಧರ್ಮಗುರುಗಳು ಏಕತಾ ಸಂದೇಶ ನೀಡುವರು .ಬಸವಣ್ಣನವರ ವಂಶಸ್ಥರಾದ ಇಂಗಳೇಶ್ವರ ಗ್ರಾಮದ ಅರವಿಂದಕುಲಕರ್ಣಿ ಮತ್ತು ಡಾ. ಬಿ ಆರ್.ಅಂಬೇಡ್ಕರ್ ವಂಶಸ್ಥರಾದ ರಾಜರತನ ಅಂಬೇಡ್ಕರ್ ಅವರಿಗೆ ವಿಶೇಷ ಸನ್ಮಾನ ಮತ್ತು   71 ಸಾಧಕರಿಗೆ ಗೌರವಿಸಲಾಗುವದು. ಸಂಜೆ 5.30 ಕ್ಕೆ ಗೀತಾ ಜಾವಡೇಕರ್ ಮತ್ತು ಡಾ ಜಯದೇವಿ ಜಂಗಮಶೆಟ್ಟಿ ಅವರಿಂದ ವಚನಸಂಗೀತ ನಡೆಯಲಿದೆ ಜ 23 ಮತ್ತು 25 ರಂದು ಬಸವ ಶಿವಯೋಗ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ದಸ್ತಿ, ರವೀಂದ್ರಶಾಬಾದಿ, ಡಾ ಗಾಂಧೀಜಿ ಮೋಳಕೇರಿ,ಮನೀಷ ಜಾಜು,ಶಿವಲಿಂಗಪ್ಪ ಬಂಡಕ್  ಸೇರಿದಂತೆ ಹಲವರಿದ್ದರು..

Leave a Comment