ಬಸವನ ಕುಂಟೆ, ಮಿಲ್ಲರ್‍ಪೇಟೆ ತೆರೆದ ಚರಂಡಿ ಸ್ವಚ್ಚತೆಗೆ ಶಾಸಕರ ಸೂಚನೆ

ಬಳ್ಳಾರಿ, ಮೇ.4: ನಗರದ ಮಿಲ್ಲರ್‍ಪೇಟೆ ಹಾಗೂ ಬಸವನ ಕುಂಟೆ ಪ್ರದೇಶದ ತೆರೆದ ಚರಂಡಿಗಳು ಕಸ ಕಡ್ಡಿಯಿಂದ ತುಂಬಿಕೊಂಡಿದ್ದು ನೀರು ಹರಿಯದೇ ದುರ್ನಾತ ಬೀರುತ್ತಿದ್ದು ಕೂಡಲೇ ಅವನ್ನು ಸ್ವಚ್ಚಗೊಳಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಸೂಚಿಸಿದ್ದಾರೆ.

ನಿನ್ನೆ ದಿನ ಈ ಪ್ರದೇಶದ ಜನತೆ ನಿವಾಸಕ್ಕೆ ಬಂದು ತಮ್ಮ ವಾರ್ಡಿನ ಯುಜಿಡಿ ಹಾಗೂ ಚರಂಡಿಗಳು ಸ್ವಚ್ಚತೆ ಮಾಡದೆ ಸಮಸ್ಯೆಗೆ ಕಾರಣವಾಗಿದೆ ಎಂದು ಶಾಸಕರಿಗೆ ಮನವಿ ಸಲ್ಲಿಸಿದ್ದರು.
ಕೂಡಲೇ ಶಾಸಕರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕರೆಮಾಡಿ ಸಮಸ್ಯೆ ಇರುವ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ತೆರೆದ ಚರಂಡಿಯಲ್ಲಿನ ಕಸವನ್ನು ತೆಗೆದು ಶಾಶ್ವತ ಪರಿಹಾರ ಕೈಗೊಳ್ಳುವಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿ, ಮುಂಬರುವ ದಿನಗಳಲ್ಲಿ ಈ ರೀತಿಯಾದ ಸಮಸ್ಯೆ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ತುಷಾರ ಮಣಿ, ಅಧಿಕಾರಿಗಳಾದ ಲೋಕನಾಥ್, ಖಾಜಾ ಮೊಯಿದ್ದೀನ್ ಮುಖ್ಯ ಆರೋಗ್ಯ ನಿರೀಕ್ಷಕ ಹನುಮಂತಪ್ಪ, ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ವೀರ ಶೇಖರ್ ರೆಡ್ಡಿ, ಪಾಲಿಕೆ ಮಾಜಿ ಸದಸ್ಯ ಮೌತ್ಕರ್ ಶ್ರೀನಿವಾಸ್ ರೆಡ್ಡಿ ಮತ್ತಿತರರು ಇದ್ದರು.

Share

Leave a Comment