ಬಳ್ಳಾರಿ ವಿಭಜನೆ ಶಾಸಕ ರೆಡ್ಡಿ ಎಚ್ಚರಿಕೆ

(ನಮ್ಮ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.30: ಗಣಿ ಜಿಲ್ಲೆಯನ್ನು ಇಬ್ಭಾಗ ಮಾಡಿ ಅಕ್ಟೋಬರ್ 3 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆ ಘೋಷಣೆ ಮಾಡಿದರೆ ಜಿಲ್ಲೆಯಲ್ಲಿನ ಹೋರಾಟ ಬೆಂಕಿಹತ್ತಿ ಉರಿಯಲಿದೆಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರಿಂದು ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರಿಗೋಸ್ಕರ ಜಿಲ್ಲೆಯನ್ನು ಇಬ್ಭಾಗ ಮಾಡಲು ನಾನು ಒಪ್ಪುವುದಿಲ್ಲ, ಮೊದಲಿನಿಂದ ಹೇಳುವಂತೆ ಅಖಂಡ ಜಿಲ್ಲೆಯಾಗಿ ಉಳಿಯಬೇಕೆಂದರು. ಬರಲಿರುವ ಸಚಿವ ಸಂಪುಟ ಸಭೆಯಲ್ಲಿ ನೂತನ ಜಿಲ್ಲೆ ರಚನೆಗೆ ಸಚಿವ ಶ್ರೀರಾಮುಲು ವಿರೋಧಿಸಲಿದ್ದಾರೆ. ಅಲ್ಲದೆ ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳು ಮುಂದೂಡಲಿದ್ದಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
@12bc = ಮಾತನಾಡಿದ್ದಾರೆ:
ನೂತನ ಜಿಲ್ಲೆಯ ವಿರೋಧಿ ಕುರಿತಾಗಿ ತಾವು ಮತ್ತಿತರರು‌ ನೀಡುವ ಹೇಳಿಕೆಯನ್ನು ಗಮನಿಸಿ ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ ಅವರು ಮಾತನಾಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ತಮ್ಮನ್ನು ಕರೆದು‌ ಮಾತನಾಡುವುದಾಗಿ‌ ಹೇಳಿದರು.
@12bc = ಪಾಲ್ಗೊಳ್ಳಲ್ಲ:
ಜಿಲ್ಲೆ ವಿಭಜನೆ ವಿರೋಧಿಸಿ ನಾಳೆ ನಡೆಯುವ ಬಳ್ಳಾರಿ ಬಂದ್ ಹೋರಾಟದಲ್ಲಿ ತಾವು ಪಾಲ್ಗೊಳ್ಳುವುದಿಲ್ಲ. ಕಾರಣ ಸರಕಾರದ ಭಾಗವಾಗಿ ನೇರವಾಗಿ ಪಾಲ್ಗೊಳ್ಳುತ್ತಿಲ್ಲ. ಆದರೆ ಪರೋಕ್ಷವಾಗಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆಂದರು.

Leave a Comment