ಬಳ್ಳಾರಿ ರಾಮೋತ್ಸವಕ್ಕೆ ಚಾಲನೆ

ಬಳ್ಳಾರಿ, ಏ.07: ನಗರದ ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗಮಂದಿರದಲ್ಲಿ ನಿನ್ನೆಯಿಂದ 8 ದಿನಗಳ ಕಾಲ ನಡೆಯುವ ರಾಮೋತ್ಸವಕ್ಕೆ ಡಾ. ಬಿ.ಕೆ. ಶ್ರೀನಿವಾಸ ಮೂರ್ತಿ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ರಾಮನ ಆದರ್ಶನಗಳನ್ನು ಇಂದಿನ ಯುವ ಜನತೆಗೆ ಸಾಂಸ್ಕತಿಕ ಮತ್ತು ಸಾಹಿತ್ಯ ಕಾರ್ಯಕ್ರಮಗಳ ಮೂಲಕ ತಿಳಿಸುವುದು ಈ ರಾಮೋತ್ಸವ ಶ್ಲಾಘನೀಯ ಕಾರ್ಯವಾಗಿದೆ ಎಂದರು.

ವಿವೇಕ ತೋರಣ ಹಮ್ಮಿಕೊಂಡಿದ್ದ ಈ ಸಮಾರಂಭದಲ್ಲಿ ಗೋವಿಂದ ಭಟ್ಟರು ನೂತನ ಪಂಚಾಂಗ ಶ್ರವಣ ಮಾಡಿದರು. ಕುಮಾರಿ ಅನುಕೃಪಾ ಅವರಿಂದ ಗೀತೆಗಳ ಗಾಯನ, ದೀಕ್ಷಾ ಅವರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ರಾಮೋತ್ಸವ ಸಮಿತಿಯ ಗಣ್ಯರಾದ ಜೆ. ಜಯಪ್ರಕಾಶ್ ಗುಪ್ತಾ, ಕೆ.ಹೆಚ್. ಹರಿಕುಮಾರ, ಡಾ. ಜಿ.ಆರ್. ವಸ್ತ್ರದ್, ಕೆ.ಎಸ್. ಬಾಬು, ಪ್ರಭುದೇವ ಕಪ್ಪಗಲ್ಲು ಮೊದಲಾದವರು ಇದ್ದರು.

Leave a Comment