ಬಳ್ಳಾರಿ ಯುವತಿ ಆಶ್ವಿಜಾಗೆ ಯುಪಿಎಸ್ ಪರೀಕ್ಷೆಯಲ್ಲಿ 423 ನೇ ಱ್ಯಾಂಕ್

ಬಳ್ಳಾರಿ, ಏ.7: ತಮ್ಮ ಅಧಿಕಾರದಿಂದ ಬಡವರಿಗೆ ಒಂದೇ ಬಾರಿಗೆ ನೂರಾರು ಮನೆಗಳನ್ನು ಕಟ್ಟಿಸಿ ಕೊಡುವ ಯೋಜನೆ ಬಗ್ಗೆ ಅರಿತು ಅದರಿಂದ ಪ್ರೇರಣೆಗೊಂಡು ತಾನು ಕೂಡ `ಜನರಿಗೆ ನೆರವಾಗುವ ಉನ್ನತ ಹುದ್ದೆ ಜಿಲ್ಲಾಧಿಕಾರಿ ಆಗಬೇಕು ಎನ್ನುವ ಮಹದಾಸೆ ಹೊತ್ತ ಯುಪಿಎಸ್‍ಸಿ ಪರೀಕ್ಷೆಗೆ ಅಂದಿನಿಂದಲೇ ಸಿದ್ದತೆ ಮಾಡಿಕೊಂಡ ನಗರದ ಯವತಿ ಅಶ್ವಿಜಾ ಈ ವರ್ಷದ ಯುಪಿಎಸ್ ಪರೀಕ್ಷೆಯಲ್ಲಿ 423ನೇ ಱ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.

ಮೂಲತಃ ತಾಲೂಕಿನ ಸಂಗನಕಲ್‍ನ ಹಾಲಿ ಬಳ್ಳಾರಿ ನಗರ ನಿವಾಸಿ, ಸಿಂಧನೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಇಂಜಿನೀಯರ್ ವೆಂಕಟರಮಣಪ್ಪ ಮತ್ತು ಸುಮಾ ದಂಪತಿಯ ಮಗಳಾದ ಆಶ್ವಿಜಾ ಈ ಸಾಧನೆ ಮಾಡಿರುವ ಯುವತಿಯಾಗಿದ್ದಾಲೆ.

ನಗರದ ಡ್ರೀಂ ವಲ್ರ್ಡ್ ಶಾಲೆಯಲ್ಲಿ ಒಂದರಿಂದ 10 ನೇ ತರಗತಿ, ನಂದಿ ಇಂಟರ್‍ನಲ್ ಕಾಲೇಜಿನಲ್ಲಿ ಪಿಯುಸಿವರೆಗೆ ವ್ಯಾಸಂಗ ಮುಗಿಸಿ, 2014-15ನೇ ಸಾಲಿನಲ್ಲಿ ಬೆಂಗಳೂರಿನ ಬಿ.ಎಂ. ಶ್ರೀನಿವಾಸಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಟೆಲಿ ಕಮ್ಯುನಿಕೇಷನ್ ಇಂಜಿನಿಯರಿಂಗ್ ಪದವಿ ಪಡೆದು, ನಂತರ ನಿರಂತರ ಅಧ್ಯಯನ ಮಾಡುವ ಮೂಲಕ ಹೈದ್ರಾನಬಾದ್, ಬೆಂಗಳೂರು ದೆಹಲಿಯಲ್ಲಿ ಕೋಚಿಂಗ್ ಪಡೆದು ರಾಜಕೀಯ ಶಾಸ್ತ್ರವನ್ನು ಮುಖ್ಯ ವಿಷಯನ್ನಾಗಿ ಆಯ್ದುಕೊಂಡು ಮೂರನೇ ಯತ್ನದಲ್ಲಿ ಯುಪಿಎಸ್‍ಸಿ ಯಲ್ಲಿ ರಾಜ್ಯಕ್ಕೆ 14ನೇ ಮತ್ತು ಒಟ್ಟಾರೆ 423ನೇ ಱ್ಯಾಂಕ್ ಪಡೆದು ಬಳ್ಳಾರಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಯುಪಿಎಸ್‍ಸಿಯಲ್ಲಿ ತಮಗೆ ರ್ಯಾಂಕ್ ದೊರೆತ ಬಗ್ಗೆ ಸಂಜೆವಾಣಿಯೊಂದಿಗೆ ಮಾತನಾಡಿದ ಅಶ್ವಿಜಾ, ತಮ್ಮ ತಂದೆಯವರು ಸಹಾಯಕ ಇಂಜಿನಿಯರ್ ಆಗಿದ್ದಾಗ, ಅವರ ಹಿಂದೆ ಹೋದ ಸಂದರ್ಭದಲ್ಲಿ ಇಲ್ಲಿನ ಗುಡಾರ ನಗರದಲ್ಲಿ ಅಂದಿನ ಜಿಲ್ಲಾಧಿಕಾರಿ ಜಾವೇದ್ ಅಕ್ತರ್ ಅವರು ನಿವೇಶನ ನೀಡಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಗುಪ್ತಾ ಅವರು ಅಲೆಮಾರಿ ಜನಾಂಗಕ್ಕೆ 200 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು. ಜೊತೆಗೆ ಅಲ್ಲಿನ ಅಲೆಮಾರಿ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಅರಿತುಕೊಂಡು ಇಂತಹ ಸೇವೆ ಮಾಡಲು ನಾನು ಯುಪಿಎಸ್‍ಸಿ ಪರೀಕ್ಷೆ ಎದುರಿಸಬೇಕೆಂಬ ಸಂಕಲ್ಪ ಮಾಡಿಕೊಂಡು ಅಂದಿನಿಂದಲೇ ಪ್ರಯತ್ನಿಸಿ ಇಂದು ಯಶಸ್ವಿಯಾಗಿದ್ದೇನೆ ಎಂದರು.

ಮಗಳ ಸಾಧನೆ ಬಗ್ಗೆ ಖುಷಿ ವ್ಯಕ್ತಪಡಿಸಿದ ತಂದೆ ವೆಂಕಟರಮಣ, ನನ್ನ ಹಾಗೆ ಮಗಳು ಇಂಜಿನಿಯರಿಂಗ್ ಮುಗಿಸಿ, ನಂತರ ಯುಪಿಎಸ್‍ಸಿ ಪರೀಕ್ಷೆಗೆ ಸಿದ್ಧಳಾದಾಗ ಅದಕ್ಕೆ ಅವರ ತಾಯಿ ಮತ್ತು ನಾನು ಅಗತ್ಯ ಸಹಕಾರ ನೀಡಿದ್ದು, ಇಂದು ಸಾರ್ಥಕವಾಗಿದೆ ಎಂದರು.

Leave a Comment