ಬಳ್ಳಾರಿ ನಗರಕ್ಕೂ ದೆಹಲಿ ಧಾರ್ಮಿಕ ಸಭೆಯ ಶಾಪ  ಆರಕ್ಕೇರಿದ ಕೊರೋನಾ ಶಂಕಿತರ ಸಂಖ್ಯೆ  ಗುಗ್ಗರಹಟ್ಟಿ ಪ್ರದೇಶದ ವ್ಯಕ್ತಿಗೆ ಸೋಂಕು ದೃಡ

ಬಳ್ಳಾರಿ, ಏ.6: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಮಾರಕವಾಗಿರುವ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚತೊಡಗಿದೆ. ನಿನ್ನೆ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು ಇದರಿಂದ ಇಲ್ಲಿ ವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಆರಕ್ಕೆ ಏರಿದೆ. ಸಧ್ಯ ನಗರದ ಹೊರ ವಲಯದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್‍ನಲ್ಲಿ ಇದ್ದ, ನವ ದೆಹಲಿಯಲ್ಲಿ ನಡೆದ ಟಿ.ಜೆ. ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ನಗರ ಗುಗ್ಗರಹಟ್ಟಿ ಪ್ರದೇಶದ ವ್ಯಕ್ತಿಯಲ್ಲಿ ಈ ಸೋಂಕು ಕಂಡಿದ್ದು. ಆತನನ್ನು ಈಗ ಜಿಲ್ಲಾ ಆಸ್ಪತ್ರೆಗೆ ದಾಕಲಿಸಲಾಗಿದೆ.

ಈ ವರೆಗೆ ಸೋಂಕಿತರು ಬಳ್ಳಾರಿ ನಗರದ ಹೊರಗಿನವರಾಗಿದ್ದರು. ಅಂದರೆ ಈ ಮೊದಲು ಪತ್ತೆಯಾದ ಸೋಂಕಿತರು ಹೊಸಪೇಟೆ ನಗರ ಮತ್ತು ಸಿರುಗುಪ್ಪ ತಾಲೂಕಿನ ಹೆಚ್.ಹೊಸಳ್ಳಿ ಗ್ರಾಮಕ್ಕೆ ಸೇರಿದವರಾಗಿದ್ದರು. ಈಗ ನಿನ್ನೆ ಪತ್ತೆಯಾಗಿರುವ ಪ್ರಕರಣ ಬಳ್ಳಾರಿಯ ಹೊರ ವಲಯದ ಗುಗ್ಗರಹಟ್ಟೆ ಪ್ರದೇಶದ ನಿವಾಸಿ
41 ವರ್ಷದ ವ್ಯಕ್ತಿಯಾಗಿದ್ದಾನೆ.

ಬಳ್ಳಾರಿ ನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಗುಗ್ಗರಹಟ್ಟೆ ಪ್ರದೇಶದ ಒಂದು ಕಿಲೋ ಮೀಟರ್ ಸುತ್ತಮುತ್ತಲಿನ 1ಕಿ.ಮೀ. ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಜಿಲ್ಲಾಡಳಿತ ಘೋಷಣೆ ಮಾಡಿದೆ. ಈ ಪ್ರದೇಶವನ್ನು ಸಂಪೂರ್ಣವಾಗಿ ಲಾಕ್ ಮಾಡಲಾಗಿದೆ.
ಆ ಬಡಾವಣೆಯಲ್ಲಿ ಮನೆ-ಮನೆ ಭೇಟಿ ಸಮೀಕ್ಷೆ ಕಾರ್ಯ ಇಂದು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಆರಂಭವಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 8 ರಿಂದ 10 ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು. ಉಳಿದ ಸಮಯದಲ್ಲಿ ಈ ಪ್ರದೇಶದ ಜನರು ಹೊರಗಡೆ ಬರದಂತೆ ನಿರ್ಬಂಧ ವಿಧಿಸಿದೆ.

ಈ ವರೆಗೆ ಜಿಲ್ಲೆಯಲ್ಲಿ 97 ಸಾವಿರದ 300 ಜನರನ್ನು ತಪಾಸಣೆ ಮಾಡಿದ್ದು, ಕೊರೋನಾ ಶಂಕಿತ 176 ಜನರ ಗಂಟಲ ದ್ರವದ ಪರೀಕ್ಷೆ ಮಾಡಲಾಗಿದ್ದು ಅವರಲ್ಲಿ ಆರು ಜನರಿಗೆ ಸೋಂಕು ಇರುವುದು ದೇಡಪಟ್ಟಿದೆ. 36 ಜನರ ವರದಿ ಬರಬೇಕಿದೆ. 136 ಜನರಲ್ಲಿ ಸೋಂಕು ಇಲ್ಲದಿರುವ ಬಗ್ಗೆ ವರದಿ ಬಂದಿದೆ. ದೇಶದ ಹಾಗು ರಾಜ್ಯದ ವಿವಿಧಡೆಯಿಂದ ಬಂದಿರುವ 1258 ಜನರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. 996 ಜನ 14 ದಿನಗಳ ಮತ್ತು 74 ಜನ 28 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ.

Leave a Comment