ಬಳ್ಳಾರಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಆರಂಭ

ಬಳ್ಳಾರಿ, ಜ.7: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದು ತಿಂಗಳು ಕಾಲ ನಡೆಯುವ ಬಳ್ಳಾರಿ ಚಾಂಪಿಯನ್ಸ್ ಟ್ರೋಫಿ ಟಿ-10 ಕ್ರಿಕೆಟ್ ಪಂದ್ಯಾವಳಿಗೆ ಇಂದು ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಚಾಲನೆ ನೀಡಿದರು.

ನಗರದ 3, 12 ಮತ್ತು 20ನೇ ವಾರ್ಡು ಬಿಟ್ಟು ಉಳಿದ 32 ವಾರ್ಡುಗಳ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ. ಲೀಗ್ ಹಂತದಲ್ಲಿ ಪಂದ್ಯಾವಳಿ ನಡೆಯಲಿದ್ದು ಒಂದೊಂದು ತಂಡ ಏಳು ಪಂದ್ಯಗಳನ್ನು ಆಡಲಿವೆ ಎಂದು ಪಂದ್ಯಾವಳಿ ಆಯೋಜಕ ನೂರ್ ಮಹಮ್ಮದ್ ತಿಳಿಸಿದರು.

ಇಂದು ಪಂದ್ಯಾವಳಿ ಉದ್ಘಾಟನೆ ಮಾಡಿದ ಶಾಸಕ ಸೋಮಶೇಖರರೆಡ್ಡಿ ನಗರದಲ್ಲಿ ವಾರ್ಡುಗಳ ವಿಂಗಡಣೆಯಾದರೂ ಆಯಾ ವಾರ್ಡಿನ ಜನರ ನಡುವೆ ಸ್ನೇಹ ಸಂಬಂಧ ಈ ಪಂದ್ಯಾವಳಿ ಮೂಲಕ ಬೆಸೆಯುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಿ.ವೆಂಕಟೇಶ್ ಪ್ರಸಾದ್, ಮೇಯರ್ ಸುಶೀಲಬಾಯಿ, ಉಪಮೇಯರ್ ದಿವ್ಯಕುಮಾರಿ, ಸದಸ್ಯರಾದ ಚಂದ್ರಕಲಾ, ಶ್ರೀನಿವಾಸ ಮೋತ್ಕರ್, ಮೊದಲಾದವರು ಇದ್ದರು.

Leave a Comment