ಬಳ್ಳಾರಿ ಐತಿಹಾಸಿಕ ಕೋಟೆ ಮೇಲೆ 63 ಅಡಿ ಕನ್ನಡ ಧ್ವಜಾರೋಹಣ

ಬಳ್ಳಾರಿ, ನ.1: ರಾಜ್ಯೋತ್ಸವದ ಅಂಗವಾಗಿ ಗಣಿ ನಾಡು ಬಳ್ಳಾರಿಯಲ್ಲಿ ನವ ಕರ್ನಾಟಕ ಯುವ ಶಕ್ತಿ ಸಂಘಟನೆ 63 ಅಡಿ ಉದ್ದದ ಕನ್ನಡ ಧ್ವಜವನ್ನು ನಗರದ ಏಖಶಿಲಾ ಬೆಟ್ಟದ ಮೇಲಿರುವ ಐತಿಹಾಸಿಕ ಕೋಟೆಯ ಮೇಲೆ ಇಂದು ನಸುಕಿನಲ್ಲಿಯೇ ಆರೋಹಣ ಮಾಡಿತು.

ಪ್ರತಿ ರಾಜ್ಯೋತ್ಸವ ದಿನದಂದು ಕೋಟೆ ಮೇಲೆ ಮುಂಜಾವಿನಲ್ಲಿಯೇ ಕನ್ನಡ ಧ್ವಜಾರೋಹಣ ಮಾಡುವ ಸಂಪ್ರದಾಯವನ್ನು ಈ ಸಂಘಟನೆ ಮಾಡಿಕೊಂಡು ಬಂದಿದ್ದು ಈ ಬಾರಿ 63 ನೇ ರಾಜ್ಯೋತ್ಸವ ಆಗಿದ್ದರಿಂದ 63 ಅಡಿ ಉದ್ದದ ಧ್ವಜವನ್ನು ಸಂಘಟನೆಯ ಮುಖಂಡರುಗಳಾದ ಸಿದ್ಮಲ್ಲ ಮಂಜುನಾಥ್, ಕಪ್ಪಗಲ್ಲು ಚಂದ್ರಶೇಖರ್ ಆಚಾರ್, ಸೇರಿದಂತೆ ಹತ್ತಾರು ಜನ ಯುವಕರು ಸೇರಿ ಆರೋಹಣ ಮಾಡಿ ಕನ್ನಡತನ ಮೆರೆದಿದ್ದಾರೆ. ಈ ಧ್ವಜ ಹಾರಾಟ ನಗರದ ಬಹುತೇಕ ಭಾಗಕ್ಕೆ ದರ್ಶನವಾಗುತ್ತದೆ.

Leave a Comment