ಬಳ್ಳಾರಿಯಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶೋ ರೂಂ ಉದ್ಘಾಟನೆ

ಬಳ್ಳಾರಿ, ಮಾ.19:ಚಿನ್ನ, ವಜ್ರ ವ್ಯಾಪಾರದಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಾರಾಟ ಸಂಸ್ಥೆಯು ‘ಗಣಿ’ನಾಡು ಬಳ್ಳಾರಿ ನಗರದಲ್ಲಿ ಶಾಖೆಯನ್ನು ಪ್ರಾರಂಭಿಸಿದೆ.

ಕರ್ನಾಟಕ ರಾಜ್ಯದಲ್ಲಿನ 17ನೇ ಶೋ ರೂಂ ಅನ್ನು (ಒಟ್ಟಾರೆಯಾಗಿ 172ನೇ ಶೋ ರೂಂ) ಬಳ್ಳಾರಿಯ ತೇರುಬೀದಿಯಲ್ಲಿ ಶನಿವಾರ ಪೂರ್ವಾಹ್ನ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಓ.ಏಷರ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಏಶರ್ ಅವರು ‘ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್’ ನ ಮುಂದಿನ ಬಹುದೊಡ್ಡ ಯೋಜನೆಯೆಂದರೆ, ಭಾರತ ದೇಶದಲ್ಲಿ ಅದರಲ್ಲಿಯೂ ಕರ್ನಾಟಕ ರಾಜ್ಯದಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ರಿಟೇಲ್ ಮಳಿಗೆಗಳನ್ನು ಸ್ಥಾಪಿಸುವುದಾಗಿದೆ. ಮುಂದಿನ ಐದಾರು ತಿಂಗಳುಗಳ ಒಳಗಡೆ ಕಂಪನಿಯು ಭಾರತ ಮತ್ತು ಇತರೆ ದೇಶಗಳಲ್ಲಿ ಇನ್ನೂ 24 ಮಳಿಗೆಗಳನ್ನು ಆರಂಭಿಸಲಿದ್ದು, ಇದಕ್ಕಾಗಿ 620 ಕೋಟಿ ರೂಪಾಯಿಗಳ ಬಂಡವಾಳ ಹೂಡಲಿದೆ. ಇದಲ್ಲದೇ ಒಂದು ಸಾವಿರಕ್ಕೂ ಅಧಿಕ ವೃತ್ತಿ ಪರರಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ ಎಂದರು.

ಈ ಶೋರೂಂನಲ್ಲಿ ಕರ್ನಾಟಕ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಚಿನ್ನಾಭರಣಗಳ ಜೊತೆಯಲ್ಲಿಯೇ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಕಂಪನಿಯ ಹಲವಾರು ಬ್ರಾಂಡ್ ಗಳ ಚಿನ್ನಾಭರಣಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ. ಮೈನ್ ಶ್ರೇಣಿಯಲ್ಲಿ ವಜ್ರಾಭರಣಗಳು, ಏರಾ-ಕಚ್ಚಾ ವಜ್ರದಿಂದ ತಯಾರಿಸಿದ ಆಭರಣಗಳು, ಪ್ರೆಸಿಯೊ-ಬೆಲೆಬಾಳುವಂತಹ ಜೆಮ್ ಜ್ಯೂವೆಲ್ಲರಿಗಳು ಮತ್ತು ಹೈ-ಶ್ರೇಣಿಯಲ್ಲಿ ಕ್ಯಾಶುವಲ್ ಆಭರಣಗಳು ಮತ್ತು ಸ್ಟಾರ್ ಲೆಟ್ ಶ್ರೇಣಿಯಲ್ಲಿ ಮಕ್ಕಳಿಗೆ ಹೊಂದುವಂತಹ ಆಭರಣಗಳು ಲಭ್ಯ ಇರುತ್ತವೆ. ಅಲ್ಲದೇ ಚಿನ್ನ, ವಜ್ರ, ಬೆಳ್ಳಿಯ ಆಭರಣಗಳಲ್ಲದೆ, ಪ್ಲಾಟಿನಂ ಆಭರಣಗಳು ಲಭ್ಯ ಇವೆ ಎಂದು ತಿಳಿಸಿದರು.

Leave a Comment