ಬಳ್ಳಾರಿಯಲ್ಲಿ ಮತ್ತೊಂದು ಪಾಸಿಟಿವ್ ಸೊಂಕಿತರ ಸಂಖ್ಯೆ 48ಕ್ಕೇರಿಕೆ

ಬಳ್ಳಾರಿ ಮೇ 31: ಜಿಲ್ಲೆಯಲ್ಲಿ ಮತ್ತೊಂದು‌ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು. ಇದರಿಂದ ಸೋಂಕಿತರ ಸಂಖ್ಯೆ 48 ಕ್ಕೇರಿದೆ.
ಮಹಾರಾಷ್ಟ್ರದಿಂದ ಬಂದಿರುವ 19 ವರ್ಷದ ಯುವತಿಗೆ ಕೋವಿಡ್ ಪಾಸಿಟಿವ್ ಸೊಂಕಿರುವುದು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದು ಸೊಂಕಿತರಾಗಿದ್ದ 11ಜನರ ಪ್ರಥಮ ಸಂಪರ್ಕಿತರಾಗಿದ್ದಾರೆ.

ವಿದ್ಯಾ ಲಾಡ್ಜ್ ಕ್ವಾರಂಟೈನ್ ನಲ್ಲಿದ್ದ ಯುವತಿಯನ್ನು ಕೋವಿಡ್ ಜಿಲ್ಲಾಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ. ಈವರಗೆ ಜಿಲ್ಲೆಯಲ್ಲಿ ಮೂರು‌ಲಕ್ಷದ 37 ಸಾವಿರ 491 ಜನರ ಪರೀಕ್ಷೆ ಮಾಡಲಾಗಿದ್ದು. 48 ಜನರಲ್ಲಿ ಸೋಂಕು‌ಕಾಣಿಸಿಕೊಂಡಿದ್ದರೆ‌ ಗುಣಮುಖರಾಗಿ 27 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಬ್ಬರು ಮಾತ್ರ ಸಾವನದನಪ್ಪಿದ್ದಾರೆ. ಇನ್ನು 20 ಜನರು ಕೋವಿಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಂಟಲು ದ್ರವ ಪಡೆದ 569 ಜನರ ಪರೀಕ್ಷ ವರದಿ ಇನ್ನೂ ಬರಬೇಕಿದೆ. 946 ಜನರು‌ ಕ್ವಾರಂಟೈನ್ ನಲ್ಲಿದ್ದಾರೆ.

Share

Leave a Comment