ಬಳೆ ನೋಡಲು ಬನ್ನಿ ಶೋಭಾಗೆ ಆರ್‌ವಿ ತಿರುಗೇಟು

ಹುಬ್ಬಳ್ಳಿ,ಮೇ 16- ನಾವು ಬಳೆ ಹಾಕಿದೀವಾ ಇಲ್ಲವಾ ತೋರಿಸಬೇಕಾ? ಎಂದು ಸಂಸದೆ ಶೋಭಾ ಕರಂದ್ಲಾಜೆಯವರು, ಸಿದ್ಧರಾಮಯ್ಯನವರ ಕುರಿತಂತೆ ಮಾಡಿದ ಟೀಕೆಗೆ ಸಚಿವ ಆರ್.ವಿ. ದೇಶಪಾಂಡೆ ತಿರುಗೇಟು ನೀಡಿದ್ದಾರೆ.
ಕುಂದಗೋಳ ಕ್ಷೇತ್ರದಲ್ಲಿ ಇಂದು ಮತ್ತು ನಾಳೆ ತಾವು ಪ್ರಚಾರ ಕೈಕೊಳ್ಳುವುದಾಗಿ ಅವರು ತಿಳಿಸಿದರು. ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ ಎಂದರು.
ಕುಂದಗೋಳ ಕ್ಷೇತ್ರದಲ್ಲಿ ಶಿವಳ್ಳಿಯವರ ಕುರಿತು ಸಹಾನುಭೂತಿ ಇದೆ, ಜೊತೆಗೆ ಸಿದ್ಧರಾಮಯ್ಯ ಸರ್ಕಾರ ಮಾಡಿರೋ ಸಾಧನೆಯೂ ಅಲ್ಲಿ ಅನುಕೂಲ ಆಗಲಿದೆ ಎಂದು ಹೇಳಿದರು.
ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ ಹಣ ವೆಚ್ಚ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.
ನಾವು ಜನರ ಪ್ರೀತಿ ವಿಶ್ವಾಸದ ಮೇಲೆ ಮತ ಕೇಳುತ್ತಿದ್ದೇವೆಯೇ ಹೊರತು ಹಣ ಬಲದಿಂದ ಅಲ್ಲ ಎಂದು ಅವರು ನುಡಿದರು.
ಚುನಾವಣೆ ಕಾಲಕ್ಕೆ ಬಳಕೆಯಾಗುವ ಶಬ್ದಗಳು ಒಳ್ಳೆಯವಾಗಿರಬೇಕು, ಸಿಕ್ಕ ಸಿಕ್ಕಂತೆ ಮಾತನಾಡುವುದು ಸರಿಯಲ್ಲ ಎಂದು ದೇಶಪಾಂಡೆ ಹೇಳಿದರು.

Leave a Comment