ಬಲೆಗೆ ಸಿಲುಕಿ ಮೀನುಗಾರ ಸಾವು

ಜೇವರ್ಗಿ,ಫೆ.15-ತಾಲ್ಲೂಕಿನ ಕಟ್ಟಿಸಂಗಾವಿ ಸಮೀಪ ಭೀಮಾ ನದಿಯ ಸೇತುವೆ ಕೆಳಗೆ ಮೀನು ಹಿಡಿಯಲು ಹೋಗಿ ಮೀನುಗಾರನೇ ಬಲಿಗೆ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಕಟ್ಟಿಸಂಗವಿ ಗ್ರಾಮದ  ಸಿದ್ದರಾಮ ತಂದೆ ಮನೋಹರ್ ಭೋವಿ( 28) ಮೃತಪಟ್ಟವರು.

ಸಿದ್ದರಾಮ ಭೋವಿ ಶುಕ್ರವಾರ ಸಾಯಂಕಾಲ ಕಟ್ಟಿಸಂಗಾವಿ ಗ್ರಾಮದ ಭೀಮಾನದಿಯ ಸೇತುವೆ ಕೆಳಗಡೆ ಹರಿವ ನೀರಿನಲ್ಲಿ ಮೀನು ಹಿಡಿಯಲು ಹೋಗಿ ಮೀನಿನ ಬಲೆಗೆ ಸಿಲುಕಿ  ಮೃತಪಟ್ಟಿದ್ದು, ಇಂದು ಶವ ಪತ್ತೆಯಾಗಿದೆ.

ಸುದ್ದಿ ತಿಳಿದು ಪಿಎಸ್ಐ ಮಂಜುನಾಥ ಹಾಗೂ ಸಿಬ್ಬಂದಿ, ಮೀನುಗಾರರ ಸಂಘದ ಅಧ್ಯಕ್ಷ ದಶರಥ ಭೋವಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment