ಬರಹಗಾರ್ತಿ ಆಗಿ ಬಿಟೌನ್ ಮರಳಲಿರುವ ಶಿಲ್ಪಾ ಶೆಟ್ಟಿ!

ಮುಂಬೈ,  ಜು 19 – ಹಲವು ವರ್ಷಗಳಿಂದ ಬಾಲಿವುಡ್ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಬಾಲಿವುಡ್ ನಟಿ  ಶಿಲ್ಪಾ ಶೆಟ್ಟಿ ಈಗ ಬರಹಗಾರ್ತಿ ಆಗಿ ಬಿಟೌನ್  ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ತಮ್ಮ ಪುತ್ರನಿಗಾಗಿ ಹೆಚ್ಚು ಸಮಯ ಮೀಸಲಿಟ್ಟಿದ್ದ ಶಿಲ್ಪಾ, ಯೋಗ ಹಾಗೂ ಕಿರುತೆರೆಯಲ್ಲಿ ನೃತ್ಯ ತೀರ್ಪುಗಾರ್ತಿಯಾಗಿ  ಮಾತ್ರ ಕಾಣಿಸಿಕೊಂಡಿದ್ದರು.

ನಟ ದಿಲ್ಜಿತ್  ದಾಸಾಂಜೆ ಅವರು ನಟಿ ಯಾಮಿ ಗೌತಮ್ ಜೊತೆಗೆ ಕಾಮಿಡಿ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಗೆ  ಸೂಚಿಸಿದ್ದು, ಈ ಚಿತ್ರದ ಮತ್ತೊಂದು ಮುಖ್ಯ ಪಾತ್ರಕ್ಕಾಗಿ ಶಿಲ್ಪಾ ಅವರನ್ನು ಕರೆತರಲು  ಚಿತ್ರ ತಂಡ ನಿರ್ಧರಿಸಿದೆಯಂತೆ.

ಈ ಚಿತ್ರದಲ್ಲಿ  ಶಿಲ್ಪಾ ಬರಹಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬೇಸಿಗೆ ರಜೆ ಕಳೆಯಲು ಲಂಡನ್ ಹಾಗೂ  ಗ್ರೀಕ್ ದೇಶಕ್ಕೆ ತೆರಳಿರುವ ಶಿಲ್ಪಾ, ಆಗಸ್ಟ್ ನಲ್ಲಿ ಮುಂಬೈಗೆ ಬಂದ ನಂತರ  ಚಿತ್ರೀಕರಣದಲ್ಲಿ ತೊಡಗಲಿದ್ದಾರಂತೆ.

ನಿರ್ದೇಶಕ ಅಜೀಜ್ ಮಿರ್ಜಾ ಅವರ ಪುತ್ರ ಹಾರುನ್ ಈ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

Leave a Comment