ಬರವಣಿಗೆಗೆ ಅಡ್ಡಿಯಾಗದ ವಯಸ್ಸು

ಚೆನ್ನೈ, ಆ. 8: ಕರುಣಾನಿಧಿ ಅವರ ಗದ್ಯ ಬರವಣಿಗೆ ಅವರ ವಯಸ್ಸು ಅಡ್ಡಿಯಾಗಲಿಲ್ಲ ಎಂಬುದಕ್ಕೆ ನಿದರ್ಶನವೆಂಬಂತೆ, ಕರುಣಾನಿಧಿ 90 ನೇ ಇಳಿ ವಯಸ್ಸಿನಲ್ಲೂ ತಮ್ಮ ಕೊನೆಯ ಚಿತ್ರ ಕಥೆ ಬರೆದಿದ್ದಾರೆ! 11ನೇ ಶತಮಾನದ ಸಮಾಜ ಸುಧಾರಕ ಹಾಗೂ ಸಮತಾವಾದಕ್ಕಾಗಿ ಹೋರಾಡಿದ ಸಂತ ರಾಮಾನುಜರ ಜೀವನವನ್ನು ಆಧರಿಸಿದ ಟಿ.ವಿ. ಧಾರಾವಾಹಿಗೆ ಚಿತ್ರಕಥೆ ಬರೆದದ್ದೇ ಅವರ ಕೊನೆಯ ಬರವಣಿಗೆಯಾಯಿತು.

ಕರುಣಾನಿಧಿ ನಡೆದು ಬಂದ ದಾರಿ

ಜೂ, 3, 1924 ನಾಗಪಟ್ಟಣಂ ಜಿಲ್ಲೆಯ ತಿರುಕ್ಕುವಲೈ ಗ್ರಾಮದಲ್ಲಿ ದಕ್ಷಿಣಾಮೂರ್ತಿಯಾಗಿ ಜನನ.
1938  ಜಸ್ಟೀಸ್ ಪಕ್ಷ ಸೇರಿದ ಅವರು ನಂತರದಲ್ಲಿ ಡ್ರಾವಿಡ ಮುನ್ನೇಟ್ರ ಕಳಗಂ ಮೂಲಕ ಆಂಧೋಲನ.
1942-8 ಪುಟಗಳ ಕೈ ಬರಹದ ಪತ್ರಿಕೆ ಮನವರ್ ನೇಷನ್, ಇದು ನಂತರದಲ್ಲಿ ಮುರಸುಳಿಯಾಯಿತು.1944 ಜುಪಿಟರ್ ಪಿಕ್ಚರ್‍ಸ್‌ನಲ್ಲಿ ಚಿತ್ರ ಸಾಹಿತ್ಯ ರಚನೆ.
1947  ಇವರ ಚಿತ್ರ ಸಾಹಿತ್ಯದ ಮೊದಲ ಚಿತ್ರ ‘ರಾಜಕುಮಾರಿ’.
1949 ಅಣ್ಣಾದುರೈಯೊಂದಿಗೆ ಸೇರ್ಪಡೆ. ಡ್ರಾವಿಡ ಮುನ್ನೇಟ್ರ ಕಳಗಂ ಬಿಟ್ಟು ಡಿಎಂಕೆ ರಚನೆ.
ಡ್ರಾವಿಡ ಮುನ್ನೇಟ್ರ ಕಳಗಂ
1952- ಇವರ ಸಾಹಿತ್ಯ ರಚನೆಯ ‘ಪರಾಶಕ್ತಿ’ ಬಿಡುಗಡೆ. ಅದರಲ್ಲಿ ಡ್ರಾವಿಡ ಆಂದೋಲನದ ಪ್ರಚಾರ.
1957 ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಗೆ ಆಯ್ಕೆ.
1961 ಡಿಎಂಕೆ ಪಕ್ಷದ ಖಜಾಂಚಿ.
1962  ವಿರೋಧ ಪಕ್ಷದ ನಾಯಕ.
1969 ಅಣ್ಣಾದುರೈ ಸಂಪುಟದಲ್ಲಿ ಲೋಕೋಪಯೋಗಿ ಸಚಿವ.
1969 ಅಣ್ಣಾದುರೈ ಮೃತರಾದ ನಂತರ ಮೊದಲ ಬಾರಿಗೆ ಮುಖ್ಯಮಂತ್ರಿ.
1976  ಭ್ರಷ್ಟಾಚಾರ ಕಾರಣದಲ್ಲಿ ಪ್ರಧಾನಿ ಇಂದಿರಾಗಾಂಧಿಯಿಂದ ಡಿಎಂಕೆ ಸರ್ಕಾರ ವಜಾ.
1977 ಎಐಎಡಿಎಂಕೆ ಸರ್ಕಾರ ರಚನೆ ವಿರೋಧ ಪಕ್ಷದಲ್ಲಿ 13 ವರ್ಷ.
1989 ಎಂಜಿಆರ್ ನಿಧನರಾದ ನಂತರ ಮತ್ತೆ ಡಿಎಂಕೆ ಅಧಿಕಾರಕ್ಕೆ
1991  ಮೇ ರಾಜೀವ್‌ಗಾಂಧಿ ಹತ್ಯೆ. ಎಐಎಡಿಎಂಕೆ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ.
1996  ಜಯಲಲಿತಾ ಪದಚ್ಯುತಗೊಂಡು ಡಿಎಂಕೆ-ಟಿಎಂಸಿಯೊಂದಿಗೆ ಅಧಿಕಾರಕ್ಕೆ.
2011  ಭ್ರಷ್ಟಾಚಾರ ಆರೋಪದಲ್ಲಿ ಜಯಲಲಿತಾ ಸರ್ಕಾರದಿಂದ ಬಂಧನ.
2004  ಡಿಎಂಕೆ ನೇತೃತ್ವದ ಮೈತ್ರಿಕೂಟ 40 ಲೋಕಸಭಾ ಸ್ಥಾನದಲ್ಲಿ ಗೆಲುವು. 7 ಕೇಂದ್ರ ಸಚಿವರು.
2006 5ನೇ ಬಾರಿಗೆ ಮತ್ತೆ ಮುಖ್ಯಮಂತ್ರಿ.
2009 ಸ್ಪೈನಲ್ ಸರ್ಜರಿ, ವೀಲ್‌ಚೇರ್‌ನಲ್ಲಿ ಓಡಾಟ.
2013 ಜನವರಿ ಸ್ಟಾಲಿನ್ ತಮ್ಮ ಉತ್ತರಾಧಿಕಾರಿಯನ್ನಾಗಿ ಘೋಷಣೆ.
2013  ಮಾರ್ಚ್ ಈಳಂತಮಿಳ್ ವಿಷಯದಲ್ಲಿ ಯುಪಿಎ ಸರ್ಕಾರದಿಂದ ಹೊರಕ್ಕೆ.
2017 ಹದಗೆಟ್ಟ ಆರೋಗ್ಯ ಸ್ಟಾಲಿನ್ ಡಿಎಂಕೆಯ ಕಾರ್ಯಾಧ್ಯಕ್ಷ.
2017 60 ವರ್ಷ ಶಾಸಕರಾಗಿದ್ದ ದಾಖಲೆ.
2017 ಹಲವು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಮುರಸುಳಿ ಕಚೇರಿಗೆ ಭೇಟಿ.
9018 ಜೂನ್ 94ನೇ ಜನ್ಮದಿನಾಚರಣೆ.
2018 ಆಗಸ್ಟ್ 7, 94 ವರ್ಷಗಳ ಸುದೀರ್ಘ ವರ್ಣಮಯ ಜೀವನಕ್ಕೆ ಶಾಶ್ವತ ವಿದಾಯ.

ವೈಷ್ಣವ ಪಂಥ ಸ್ಥಾಪಿಸಿದ ಸಂತ ರಾಮಾನುಜರನ್ನು ಕುರಿತಾದ ಈ ಟಿ.ವಿ. ಧಾರಾವಾಹಿಗೆ 2005ರಲಿ ಕರುಣಾನಿಧಿ ಸಂಭಾಷಣೆ ಬರೆದುಕೊಟ್ಟರು. ಹಿಂದುಳಿದ ವರ್ಗದವರ ಏಳಿಗೆಗೆ ಒತ್ತು ನೀಡಿದ್ದ ರಾಮಾನುಜರ ಕುರಿತು ಕರುಣಾನಿಧಿ ಮೆಚ್ಚುಗೆ ಹಾಗೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರು.

ತಮ್ಮ 94ರ ಹರೆಯದಲ್ಲಿ ನಿನ್ನೆಯಷ್ಟೆ ಇಹಲೋಕ ತ್ಯಜಿಸಿದ ಕರುಣಾನಿಧಿ, ತಮಿಳು ಸಾಹಿತ್ಯ, ಕಾವ್ಯ, ಮತ್ತು ನಾಟಕ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿದವರಾಗಿದ್ದರು. ಹದಿಹರೆಯದಲ್ಲಿ 1941ರಲ್ಲೇ ಅವರು ‘ಮಾನವ ನೇಸನೆಂಬ ಕೈಬರಹದ ಪತ್ರಿಕೆ ನಡೆಸುತ್ತಿದ್ದರು.

ನಂತರ ಚಿತ್ರ ರಂಗಕ್ಕೆ ಕಾಲಿಟ್ಟ ಕರುಣಾ, ೧೯೪೭ರಲ್ಲಿ ಅಂದಿನ ಯಶಸ್ವೀ ಚಿತ್ರ ‘ರಾಜಕುಮಾರಿ’ಗೆ ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದರು. ಇದು ಖ್ಯಾತ ನಾಯಕ ನಟ ಎಂ.ಜಿ. ರಾಮಚಂದ್ರನ್‌ರ (ಎಂಜಿಆರ್) ಚೊಚ್ಚಲ ಚಿತ್ರವಾಗಿತ್ತು. ವಿಪರ್‍ಯಾಸವೆಂದರೆ, ನಂತರದ ಬೆಳವಣಿಗೆಗಳಲ್ಲಿ ಕರುಣಾರಿಗೆ ಇದೇ ಎಂಜಿಆರ್ ರಾಜಕೀಯ ವೈರಿಯಾಗಿ ಏಐಎಡಿಎಂಕೆ ಪಕ್ಷ ಸ್ಥಾಪಿಸಿದರು!ಇದಾದ ಬಳಿಕ ಡಿ.ಎಂ.ಕೆ. ಮುಖ್ಯಸ್ಥ ಕರುಣಾನಿಧಿ ಖ್ಯಾತ ನಾಯಕ ನಟ ಶಿವಾಜಿ ಗಣೇಶನ್‌ರ ಮೊದಲ ಚಿತ್ರ ‘ಪರಾಶಕ್ತಿ’ಗೆ ರಚಿಸಿದ ಸಂಭಾಷಣೆ ಹಾಗೂ ಅದನ್ನು ಕಿರೀಟ
ಧಾರಿ ಶಿವಾಜಿ ಪ್ರಸ್ತುತಪಡಿಸಿದ ರೀತಿಯಂತೂ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿ ಅತ್ಯಂತ ಯಶಸ್ವಿಯಾಗಿ ಪ್ರೇಕ್ಷಕರ ಮನಸೆಳೆಯಿತು. ಅಲ್ಪಸ್ವಲ್ಪ ಅಂದಿನ ರಾಜಕೀಯ ಬೆಳವಣಿಗೆಯನ್ನೂ ಸೂಚಿಸುವಂತಿದ್ದ ಆ ಸಂಭಾಷಣೆಯಿಂದಾಗಿ ಕರುಣಾನಿಧಿ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಬೆಳೆಯುವಂತಾಯಿತು!

Leave a Comment