ಬಯಲು ವೀರಾಂಜನೇಯ ಸ್ವಾಮಿಗೆ ವಿಶೇಷಪೂಜೆ

ಜಗಳೂರು.ಸೆ.8; ತಾಲ್ಲೂಕಿನ ಮರೇನಹಳ್ಳಿ ರಸ್ತೆಯಲ್ಲಿರುವ ಶ್ರೀ ಗಿರಣಿ ತಿಮ್ಮಾರೆಡ್ಡಿ ಬಡಾವಣೆಯಲ್ಲಿರುವ ಶ್ರೀ ಬಯಲು ವೀರಾಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಇಂದು ಕೊನೆಯ ಶ್ರಾವಣ ಶನಿವಾರ ಆಗಿರುವುದರಿಂದ ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ಬಯಲು ವೀರ ಆಂಜನೇಯ ಸ್ವಾಮಿಗೆ ವಿಶೇಷವಾಗಿ ಹೂವಿನ ಅಲಂಕಾರ ಹಾಗೂ ಕೇಸರಿ ಅಲಂಕಾರ ಆಭರಣಗಳ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಲ್ಲಿ ಜಗಳೂರಿನ ಭಾಗದ ಭಕ್ತರಿಗೆ ಪ್ರತಿ ಶನಿವಾರ ವಿಶೇಷ ಪೂಜೆ ನಡೆಯುತ್ತದೆ. ಪ್ರಧಾನ ಅರ್ಚಕರಾದ ಪ್ರದೀಪ್ ಜ್ಯೋತಿ ಕಟ್ಪೀಸ್ ಮಾತನಾಡಿ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಬಯಲು ಜಾಗವಿತ್ತು ಇಲ್ಲಿ ಚಿಕ್ಕಮೂರ್ತಿ ಇತ್ತು ಪ್ರತಿ ವರ್ಷ ಹಂತಹಂತವಾಗಿ ಬೆಳೆದು ಸಕಲ ಭಕ್ತಾದಿಗಳಲ್ಲಿ ಬಂದ ನಂಬಿಕೆಯನ್ನು ಉಳಿಸಿ ಪ್ರತಿ ಅಮಾವಾಸ್ಯೆ ಮಂಗಳವಾರ, ಶನಿವಾರದಂದು ಅಭಿಷೇಕ ಪೂಜೆ ಅರ್ಚನೆ ನಡೆಯುತ್ತದೆ. ಪ್ರತಿ ವರ್ಷ ಶ್ರಾವಣ ಶನಿವಾರದಿಂದ ನಾಲ್ಕು ವಾರಗಳ ಸಮೇತ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತದೆ. ಈ ದೇವಸ್ಥಾನ ಪ್ರತಿಯೊಬ್ಬ ಜನಗಳಲ್ಲಿ ಅತ್ಯಂತ ಯಶಸ್ವಿಯಾಗಿದೆ ಶ್ರೀ ಬಯಲು ವೀರ ಆಂಜನೇಯ ಸ್ವಾಮಿ ಎಂದು ಹೆಸರು ಗಳಿಸಿದೆ. ಈ ದೇವಸ್ಥಾನಕ್ಕೆ ಅಧ್ಯಕ್ಷರಾಗಿ ಸತೀಶ್ ರೆಡ್ಡಿ, ಪ್ರಧಾನ ಅರ್ಚಕರಾಗಿ ಪ್ರದೀಪ್ ಜ್ಯೋತಿ ಕಟ್ಪೀಸ್, ಪೂಜಾರಿ ಮುರುಗೇಶ್ ಸ್ವಾಮಿ, ಸಹ ಪೂಜಾರಿಗಳಾಗಿ ಕೃಷ್ಣಮೂರ್ತಿ ಸಂಜೀವ ತಿಪ್ಪೇಸ್ವಾಮಿ ಇದ್ದರು. ಇಂದು ಕೊನೆಯ ಶನಿವಾರ ಆಗಿರುವುದರಿಂದ ಶ್ರೀ ಸ್ವಾಮಿಗೆ ವಿಶೇಷವಾಗಿ ಭಕ್ತಾದಿಗಳು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ದರ್ಶನ ಪಡೆದರು.

Leave a Comment