ಬನ್ನಿ ಚಹಾ ಕುಡಿಯೋಣ ವಾಜಪೇಯಿ ನೆನಪು ಸ್ಮರಿಸಿದ ಅರುಣ್ ಶೌರಿ

ನವದೆಹಲಿ, ಆ ೧೭- ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಮಯದಲ್ಲಿ  ಗೆಲುವು ನಿರೀಕ್ಷಿಸಿದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಸೋಲು ಅನುಭವಿಸಿತ್ತು. ಆಗ ಮಂತ್ರಿ ಮಂಡಲ ಹಿರಿಯ ಸಚಿವರಿಗೆ ವಾಜಪೇಯಿ ದೂರವಾಣಿ ಕರೆ ಮಾಡಿ ಪಕ್ಷದ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಸಭೆ ಕರೆದಿದ್ದರು.

ಮೈತ್ರಿಕೂಟದ ಪಾಲುದಾರರಾಗಿದ್ದ ಶಿವಸೇನೆ ನಾಯಕರು ಮಾತನಾಡಿ ಬಿಜೆಪಿ ಅಧಿಕಾರಕ್ಕೆ ಬರಲು ಅವಕಾಶವಿತ್ತು ಆದರೆ ಪಿತೂರಿ ನಡೆಸಲಾಗಿದೆ  ಎಂದು ಹೇಳಿತ್ತು.. ಮತ್ತೊಬ್ಬ ನಾಯಕ ಮಾತನಾಡಿ, ಮುಸ್ಲಿಮರು ಪಕ್ಷದ ವಿರುದ್ದ ಮತಹಾಕಿದ್ದಾರೆ  ಎಂದರೆ, ಮತ್ತೊಬ್ಬರು ಪಕ್ಷ ಸಂಘಟನೆಯಲ್ಲಿ  ನಾವು ವಿಫಲರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದುಂಟು.

ಈ ಎಲ್ಲ ವಿಷಯವನ್ನು ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅರುಣ್  ಶೌರಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪ್ರತಿಯೊಬ್ಬ ರು  ತಮ್ಮದೇ ಧಾಟಿಯಲ್ಲಿ ವಾಜಪೇಯಿ ಅವರತ್ತ ಬಟ್ಟು ಮಾಡಿ ತೋರಿಸಿದರು. ಆತ್ಮಾವಲೋಕನ ಸಭೆಯಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಎಲ್ಲ ವಿಷಯವನ್ನು ಸಮಾಧಾನದಿಂದ ಆಲಿಸಿದ ವಾಜಪೇಯಿ ಹಸನ್ಮುಖರಾಗಿಯೇ ಇದ್ದರು.
ಅಂತಿಮವಾಗಿ ಪಕ್ಷ ಸೋಲಿಗೆ ನಿರ್ದಿಷ್ಟ  ಹೊಸ ಕಾರಣಗಳು ಏನೆಂಬುದು ಗೊತ್ತಾಗಲಿಲ್ಲ.

ಚುನಾವಣೆಯಲ್ಲಿ ಸೋತು ಬೇಸರಗೊಂಡಿದ್ದ ನಾಯಕರಿಗೆ ವಾಜಪೇಯಿ ಹೇಳಿದ್ದು ಏನು ಗೊತ್ತೆ? ನಡೆಯಿರಿ ಎಲ್ಲರೂ ಚಹಾ ಕುಡಿಯೋಣ ಎಂದು  ವಾಜಪೇಯಿ ಒಂದು ಸಾಲಿನ ಸಂದೇಶ ನೀಡಿ ಎಲ್ಲರನ್ನು  ಸಮಾಧಾನ ಪಡಿಸಿದರು. ಇದು ವಾಜಪೇಯಿಯವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಅರುಣ್ ಶೌರಿ ಬಣ್ಣಿಸಿದರು.

ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅರುಣ್ ಶೌರಿ ಅತ್ಯಂತ ನಿಕಟವರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ವಾಜಪೇಯಿ ಸಂಪೂರ್ಣ ಅಧಿಕಾರ ನೀಡಿದ್ದರು. ಎಂದು ಹೇಳಿದರು.

ಸಚಿವ ಸಂಪುಟ ಸಭೆಯಲ್ಲಿ  ವಾಜಪೇಯಿ ಹಾಗೂ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ನಂತರ ಪ್ರತಿಯೊಬ್ಬ ಕ್ಯಾಬಿನೆಟ್ ಮಂತ್ರಿಗೂ ಮಾತನಾಡಲು ಅವಕಾಶ ಕಲ್ಪಿಸುತ್ತಿದ್ದರು. ಸಚಿವರು ಮಾತನಾಡುವ ಸಮಯದಲ್ಲಿ ವಾಜಪೇಯಿ ತಮ್ಮ ಕಣ್ಣನ್ನು ಮುಚ್ಚಿಕೊಂಡು ಸಚಿವರು ಪ್ರಸ್ತಾಪಿಸುವ ವಿಷಯಗಳನ್ನು ಶಾಂತಚಿತ್ತದಿಂದ ಆಲಿಸುತ್ತಿದ್ದರು. ಸಚಿವರು ಪ್ರಸ್ತಾಪಿಸಿದ ವಿಷಯವನ್ನು  ಸರಿ ಎಂದು ಬೆನ್ನುತಟ್ಟುತ್ತಿದ್ದರು. ಇದು ಸಂಪುಟ ಸಹೋದ್ಯೋಗಿಗಳ ಜತೆ ಅತ್ಯಂತ ವಿನಮ್ರತೆಯಿಂದ ನಡೆಸಿಕೊಳ್ಳುತ್ತಿದ್ದರು ಎಂದು ಅರುಣ್ ಶೌರಿ  ತಮ್ಮ ನೆಚ್ಚಿನ ವಾಯಕನ ಜತೆಗಿನ ಅನುಭವವನ್ನು ಮೆಲುಕು ಹಾಕಿದರು.

Leave a Comment