ಬನಶಂಕರಿ ದೇವಿಗೆ ಬೆಳ್ಳಿ ಕವಚ ಅಲಂಕಾರ

ಚಿಕ್ಕನಾಯಕನಹಳ್ಳಿ, ಜ. ೧೪- ಬನದ ಹುಣ್ಣಿಮೆ ಪ್ರಯುಕ್ತ ಪಟ್ಟಣದ ಬನಶಂಕರಿ ದೇವಾಲಯದಲ್ಲಿ ದೇವಿಗೆ ಬೆಳ್ಳಿ ಕವಚ ಅಲಂಕಾರ, ಪೂಜೆ  ಹಮ್ಮಿಕೊಳ್ಳಲಾಗಿತ್ತು, ಭಕ್ತರು ದೇವಾಲಯಕ್ಕೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಬನಶಂಕರಿ ದೇವಿ ಹಾಗೂ ಚೌಡೇಶ್ವರಿ ದೇವಿಯು ವಿಶೇಷವಾಗಿ ಅಲಂಕರಿಸಲಾಗಿತ್ತು. ಬನದ ಹುಣ್ಣಿಮೆ ಪ್ರಯುಕ್ತ ದೇವಾಲಯವು ವಿದ್ಯುತ್ ದೀಪಾಲಂಕರಾದೊಂದಿಗೆ ರಂಜಿಸುತ್ತಿತ್ತು.

ಬೆಳಿಗ್ಗೆ ಕೆರೆ ಬಾವಿಯಿಂದ ಬನಶಂಕರಿ ದೇವಿಯ ಕಳಸವನ್ನು ಮಂಗಳವಾದ್ಯದೊಂದಿಗೆ ವೀರಮಕ್ಕಳ ಜತೆಗೂಡಿ ದೇವಾಲಯಕ್ಕೆ ಕರೆತಂದ ಭಕ್ತರು ಬನಶಂಕರಿ ಅಮ್ಮನವರ ರಥೋತ್ಸವವನ್ನು ನಡೆಸಿದರು. ನಂತರ ದೇವಾಂಗ ಸಂಘದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಬನದ ಹುಣ್ಣಿಮೆ ಪ್ರಯುಕ್ತ ಸಂಜೆ ಬನಶಂಕರಿ ದೇವಿಯ ಉಯ್ಯಾಲೋತ್ಸವ ನಡೆಯಿತು.
ರಥೋತ್ಸವದಲ್ಲಿ ದೇವಾಂಗ ಸಂಘದ ಅಧ್ಯಕ್ಷ ಸಿ.ಟಿ. ಜಯಕೃಷ್ಣ, ಪುರಸಭಾ ಸದಸ್ಯರಾದ ಸಿ.ಆರ್. ತಿಮ್ಮಪ್ಪ, ಸಿ.ಕೆ. ಕೃಷ್ಣಮೂರ್ತಿ, ನಿರ್ದೇಶಕರುಗಳಾದ ಸಿ.ಟಿ. ಪಾಂಡುರಂಗ, ಸಿ.ಎ. ಕುಮಾರಸ್ವಾಮಿ, ಸಿ.ವಿ. ಪ್ರಕಾಶ್, ಸಿ.ಎಸ್. ಧನರಾಜು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

Leave a Comment