ಬದುಕಿನ ಸೆಲ್ಫಿ

* ಚಿಕ್ಕನೆಟಕುಂಟೆ ಜಿ.ರಮೇಶ್

’ಜೊತೆ ಜೊತೆಯಲಿ’, “ನವಗ್ರಹ”, ’ಸಾರಥಿ’ ಚಿತ್ರದ ಬಳಿಕ ನಿರ್ದೇಶಕ ದಿನಕರ್ ತೂಗದೀಪ್ ಬದುಕಿನ ಚಿತ್ರಣ ಅನಾವರಣ ಮಾಡುವ ’ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಯ ಹಂತಕ್ಕೆ ತಂದಿದ್ದಾರೆ. ನಟರಾದ ಪ್ರೇಮ್, ಪ್ರಜ್ವಲ್ ಮತ್ತು ಪ್ರತಿಭಾನ್ವಿತೆ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗಂತೂ ಎಲ್ಲರೂ ಸೆಲ್ಫಿಯ ಹಿಂದೆ ಬಿದ್ದಿದ್ದಾರೆ. ಇಂತದುದೇ ವಿಷಯವನ್ನು ಮುಂದಿಟ್ಟುಕೊಂಡು ನಿರ್ದೇಶಕ ದಿನಕರ್ ತೂಗದೀಪ “ಲೈಫ್ ಜೊತೆ ಒಂದ್ ಸೆಲ್ಫಿಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಯ ಹಂತಕ್ಕೆ ತಂದಿದ್ದಾರೆ.

ಕಳೆದವಾರ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು.ನಟ ದರ್ಶನ್,ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜ್,ನಟ ಆದಿತ್ಯ ಸೇರಿದಂತೆ ಮತ್ತಿತರು ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು.

ಈ ವೇಳೆ ದರ್ಶನ್, ಮೂರು ಹಿಟ್ ಚಿತ್ರ ನೀಡಿ ಮತ್ತೊಂದು ಚಿತ್ರ ನೀಡಲು ತಡ ಮಾಡದೆ ಮುಂದಿನ ಚಿತ್ರವನ್ನು ಶೀಘ್ರ ಕೈಗೆತ್ತಿಕೊಳ್ಳುವಂತೆ ಸಹೋದರ ದಿನಕರ್‌ಗೆ ಸಲಹೆ ನೀಡಿದರು.ಸಿನಿಮಾ ಎನ್ನುವುದು ಒಂದು ಕುಟುಂಬವಿದ್ದಂತೆ ತಂಡಕ್ಕೆ ಯಾರಿಗೆ ಏನೇ ಆದರೂ ಇಡೀ ತಂಡ ಕ್ಯಾಮರ ಮುಂದೆ ನಿಲ್ಲುವುದು ಕಷ್ಟವಾಗುತ್ತದೆ.

ಒಳ್ಳೆಯ ಸಿನಿಮಾವಾಗಲಿದೆ ಎನ್ನುವ ನಂಬಿಕೆ ಇದೆ.ನಿರ್ಮಾಪಕ ಸಂವೃದ್ಧಿ ಮಂಜುನಾಥ್ ಅವರಿಗೆ ಹೆಸರಿಗೆ ತಕ್ಕಂತೆ ಸಂವೃದ್ಧಿ ಮೂಡಿ ಬರಲಿ ಎಂದು ಹರಸಿದರು. ನಿರ್ದೇಶಕ ದಿನಕರ್, ಪತ್ನಿ ಮಾನಸ ಕಥೆ ಬರೆದಿದ್ದರು

ಕಥೆಯ ಎಳೆ ಕೇಳಿದ ನಿರ್ಮಾಪಕ ಸಂವೃದ್ಧಿ ಮಂಜುನಾಥ್ ಎರಡೇ ನಿಮಿಷದಲ್ಲಿ ಮರುಮಾತನಾಡದೆ ಚಿತ್ರ ನಿರ್ಮಾಣ ಮಾಡಲು ಒಪ್ಪಿಕೊಂಡರು. ಮೊದಲು ಹೊಸ ಕಲಾವಿದರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಉದ್ದೇಶವಿತ್ತು.ಆಗ ಸಂಗೀತ ನಿರ್ದೇಶಕ ಹರಿಕೃಷ್ಣ ಸ್ಟಾರ್ ಕಲಾವಿದರಿದ್ದರೆ ಸೂಕ್ತ ಎನ್ನುವ ಸಲಹೆ ನೀಡಿದರು ಅವರ ಸಲಹೆಯಂತೆ ಪ್ರೇಮ್,ಪ್ರಜ್ವಲ್ ಮತ್ತು ಹರಿಪ್ರಿಯಾ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿ ಕೊಳ್ಳಲಾಯಿತು. ಚಿತ್ರ ಹೇಗೆ ಆರಂಭವಾಗಿ,ಹೇಗೆ ಮುಗಿಯಿತು ಎನ್ನುವುದೇ ಗೊತ್ತಾಗಲಿಲ್ಲ ಎಂದು ಹೇಳಿಕೊಂಡರು.

ಚಿತ್ರವನ್ನು ಗೋವಾ ಮುರುಡೇಶ್ವರ ಸೇರಿದಂತೆ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ. ಸದ್ಯ ಚಿತ್ರೀಕರಣ ಮುಗಿಸಿದು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ. ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು.

ನಟ ಪ್ರೇಮ್, ದಿನಕರ್ ಜೊತೆ ಮತ್ತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ.ಪಾತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರೆ ನಟ ಪ್ರಜ್ವಲ್, ದಿನಕರ್ ಜೊತೆ ಈ ಹಿಂದೆ ಮೂರು ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು ಅದು ಸಾಧ್ಯವಾಗಿರಲಿಲ್ಲ.ಒಳ್ಳೆಯ ಪಾತ್ರ ಸಿಕ್ಕಿದೆ ತಾಯಿಯಾಗಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ ಎಂದು ಪಾತ್ರ ಬಗ್ಗೆ ವಿವರ ನೀಡಿದರು.

ನಟಿ ಹರಿಪ್ರಿಯಾ,ಈ ಹಿಂದಿನ ನನ್ನ ಎರಡು ಚಿತ್ರಗಳನ್ನು ದಿನಕರ್ ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿತ್ತು ಎರಡೂ ಚಿತ್ರಗಳೂ ಯಶಸ್ವಿಯಾಗಿತ್ತು. ಈಗ ಈ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಎಲ್ಲರೂ ಲವಲವಿಕೆಯಿಂದ ನಟಿಸಿದ್ದೇವೆ. ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಲಿಲ್ಲ. ಚಿತ್ರತಂಡ ಪ್ಯಾಕಪ್ ಆದಾಗ ತುಂಬಾನೇ ಬೇಜಾರಾಯಿತು ಎಂದು ಹೇಳಿಕೊಂಡರು.

ನಿರ್ಮಾಪಕ ಸಂವೃದ್ಧಿ ಮಂಜುನಾಥ್, ಬದುಕಿನ ಚಿತ್ರವನ್ನು ಈ ಚಿತ್ರದ ಮೂಲಕ ತೋರಿಸಿದ್ದೇವೆ.ಚಿತ್ರ ನೋಡುವಾಗ ಎಲ್ಲರ ಜೀವನದ ನೆನೆಪಾಗಲಿದೆ. ಡೇಟ್ ಕೊಟ್ಟರೆ ನಟ ದರ್ಶನ್ ಅವರಿಗೆ ಚಿತ್ರ ಮಾಡಲಾಗುವುದು ಎಂದರು.

ಎಲ್ಲರ ಜೀವನದಲ್ಲಿ ನಡೆಯುವ ಘಟನೆ.ಮೂರು ಹಾಡುಗಳಿವೆ ಇಷ್ಟವಾಗಲಿದೆ ಎಂದು ಸಂಗೀತ ನಿರ್ದೇಶಕ ಹರಿಕೃಷ್ಣ ಹೇಳಿಕೊಂಡರೆ, ಸುಧಾರಾಣಿ,ಒಳ್ಳೆಯ ಪಾತ್ರ ಸಿಕ್ಕಿದೆ. ಚಿತ್ರೀಕರಣದ ಸಮಯದಲ್ಲಿ ವಯಕ್ತಿಕ ಸಮಸ್ಯೆಯಾಗಿತ್ತು. ಆಗ ಇಡೀ ತಂಡ ಬೆನ್ನೆಲುಬಾಗಿ ನಿಂತುಕೊಂಡಿತು ಎಂದು ಕೃತಜ್ಞತಾ ಭಾವ ವ್ಯಕ್ತಪಡಿಸಿದರು.

Leave a Comment