ಬಡ ಮಕ್ಕಳ ಶಿಕ್ಷಣಕ್ಕೆ ಬದುಕು ಮೀಸಲಿಟ್ಟ ಲಕ್ಷ್ಮಣರಾವ್

ತುಮಕೂರು, ಸೆ. ೨೦- ಮಲೆನಾಡಿನ ಪರಿಸರದ ಶಿವಮೊಗ್ಗದ ಸಾಗರದಲ್ಲಿ 1936ರ ಅ. 12 ರಂದು ಜನಿಸಿದ ಎನ್. ಲಕ್ಷ್ಮಣ್‌ರಾವ್ ಅವರು ತಮ್ಮ ಇಡೀ ಜೀವನವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮುಡುಪಾಗಿಟ್ಟು ಇತರರಿಗೆ ಮಾದರಿಯಾಗಿದ್ದು, ತಮ್ಮ ಬದುಕಿನ ಪಯಣವನ್ನು ಮುಗಿಸಿದ್ದಾರೆ.
ವೃತ್ತಿಯಲ್ಲಿ ಆರ್‌ಎಂಎಸ್ ಅಧಿಕಾರಿ ಆಗಿದ್ದ ಶ್ರೀಯುತರು ಕಲೆಗೆ ಬೆಲೆ ನೀಡುತ್ತಿದ್ದರು. ಸ್ವತಃ ಅವರೇ ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತ್ಯಾಗಿ ಸಂಸಾರದಲ್ಲಿ ಸರಿಗಮ, ಸಂಸಾರ ನೌಕೆ, ಪೊಲೀಸ್ ವೆಂಕಣ್ಣ, ಪೌರಾಣಿಕ ನಾಟಕಗಳಾದ ಎಚ್ಚೆಮ್ಮನಾಯಕ, ಟಿಪ್ಪು ಸುಲ್ತಾನ್, ದಶರಥ ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದಿದ್ದರು.
ಇವರು ಅಭಿನಯಿಸುವ ನಾಟಕಗಳಿಗೆ ಉಪಯೋಗಿಸುವ ಸಲಕರಣೆಗಳನ್ನು ಲಕ್ಷ್ಮಣ್ ಅವರೆ ಸ್ವತಃ ತಾವೇ ತಮ್ಮ ಕೈಯಾರೆ ತಯಾರಿಸುತ್ತಿದ್ದರು. ಇವರ ಒಂದೊಂದು ಪಾತ್ರವೂ ಮೈ ನವಿರೇಳಿಸುವಂತಿತ್ತು. ಎಂತಹವರನ್ನು ಸಹ ಭಾವುಕರನ್ನಾಗಿಸುತ್ತಿತ್ತು.
ಇವರು ತಮ್ಮ ಮಕ್ಕಳಿಗೂ ಸಹ ಶಿಕ್ಷಣದ ಜತೆಗೆ ಚಿತ್ರಕಲೆ, ವೀಣಾವಾದನ, ನಾಟಕ, ಭರತನಾಟ್ಯ ಹೀಗೆ ಅವರ ಮೊಮ್ಮಕ್ಕಳು ಸಹ ಅವರಂತೆ ಕಲೆಗಾರರ ಕುಟುಂಬ ಎಂದರೆ ತಪ್ಪಾಗಲಾರದು. ಇವರ ಧರ್ಮಪತ್ನಿ ಸಹ ನಾಟಕದ ನಿರ್ದೇಶಕಿಯಾಗಿದ್ದರು.
ಲಕ್ಷ್ಮಣ್‌ರಾವ್ ಅವರು ಸೆ. 12 ರಂದು ಇಹಲೋಕ ತ್ಯಜಿಸಿದ್ದು, ಪತ್ನಿ, ನಾಲ್ಕು ಮಕ್ಕಳು, ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ.

Leave a Comment