ಬಡ್ತಿ ಮೀಸಲಾತಿ ಸಂವಿಧಾನ ಬದ್ಧ ಹಕ್ಕೇ ಹೊರತು ಭಿಕ್ಷೆ ಅಲ್ಲ

ಕಲಬುರಗಿ,ಆ.” ಬಡ್ತಿ ಮೀಸಲಾತಿ ಸಂವಿಧಾನಬದ್ಧ ಹಕ್ಕೇ ಹೊರತು ಭಿಕ್ಷೆ ಅಲ್ಲ. ಇದಕ್ಕಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರು ಸಂಘಟಿತರಾಗಿ ಹೋರಾಟ ನಡೆಸಬೇಕಾದ ಅಗತ್ಯವಿದೆ” ಎಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಅಪರ ನಿರ್ದೇಶಕ ಡಿ.ಆರ್.ರಾಮಚಂದ್ರಯ್ಯ ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ಎಸ್.ಸಿ./ಎಸ್.ಟಿ.ನೌಕರರ ಸಮನ್ವಯ ಸಮಿತಿ ಜಿಲ್ಲಾ ಶಾಖೆ ಹಾಗೂ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹೈದ್ರಾಬಾದ ಕರ್ನಾಟಕ ವಿಭಾಗೀಯ ಶಾಖೆಯ ಸಂಯುಕ್ತಾಶ್ರಯದಲ್ಲಿ ಮುಂದಿನ ದಿನಗಳಲ್ಲಿ ಪ.ಜಾ./ಪ.ಪಂ. ಸರಕಾರಿ ನೌಕರರ ಬಡ್ತಿ ಮೀಸಲಾತಿಯಲ್ಲಿ ಆಗುವ ಸಾಧಕ-ಬಾಧಕ ಕುರಿತು ನಗರದ ಕನ್ನಡ ಭವನದಲ್ಲಿಂದು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಮೀಸಲಾತಿ ಅಗತ್ಯವಾಗಿದೆ ಎಂದರು.
” ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ಸಂವಿಧಾನದ ಹಕ್ಕು, ನಾವು ಸಂವಿಧಾನದ ಹಕ್ಕನ್ನು ಕೇಳುತ್ತಿದ್ದೇವೆಯೇ ಹೊರತು ಭಿಕ್ಷೆಯನ್ನಲ್ಲ ಎಂಬುವುದನ್ನು ಪ.ಜಾ/ಪ.ಪಂ.ನೌಕರರು ಅರಿತುಕೊಳ್ಳಬೇಕಾಗಿದೆ. ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ಸಂವಿಧಾನದ ಬದ್ಧವಾದ ಈ ಹಕ್ಕನ್ನು ಪಡೆಯಲು ಸಾಧ್ಯವಿದೆ” ಎಂದರು.
ಸಮಿತಿ ಹೈ-ಕ ವಿಭಾಗೀಯ ಅಧ್ಯಕ್ಷ ವಿಕಾಸ ಕೆ.ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ಎನ್.ಬಿ.ಶಿವರುದ್ರಪ್ಪ, ಮಲ್ಲಪ್ಪಾ ಬಿ.ಕಾಳೆ, ಡಿ.ಶಿವಶಂಕರ ವಿಷಯ ಮಂಡಿಸಿದರು. ಸಮಿತಿ ಗೌರವಾಧ್ಯಕ್ಷ ಕೆ.ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಬಿ.ರಾಂಪುರೆ, ಶಿವಶಂಕರೆಪ್ಪ ಗುರುಗುಂಟೆ, ಶರಣಬಸಪ್ಪ, ವಿಜಯ ದಶರಥ ಎಸ್.ಸಂಗನ್, ಸುರೇಶ ಶರ್ಮಾ, ಮಾರುತಿ ಗೋಖಲೆ, ಬಿ.ಎಚ್.ನಾಡಗಿರಿ, ಬಸವರಾಜ ಭಾಗೋಡಿ ವೇದಿಕೆ ಮೇಲಿದ್ದರು.
ಚಾಮರಾಜ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು. ಸತೀಶ ಸಜ್ಜನ ವಂದಿಸಿದರು.

Leave a Comment