ಬಡವರಿಗೆ ಪಡಿತರ ವಿತರಣೆ

ರಾಯಚೂರು.ಏ.02- ಕೊರೊನಾ ಹಿನ್ನೆಲೆಯ ಲಾಕ್ ಡೌನ್‌ನಿಂದಾಗಿ ಮುಂದಿನ ಎರಡು ತಿಂಗಳ ಕಾಲ ಉಂಟಾಗಬಹುದಾದ ಸಮಸ್ಯೆ ನಿವಾರಣೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರಕಟಿಸಿದ ಆಹಾರ ಧಾನ್ಯ ವಿತರಣೆ ಇಂದು ನಗರದ ಸಿಯಾತಲಾಬ್ ಬಡಾವಣೆಯಲ್ಲಿ ಕೈಗೊಳ್ಳಲಾಯಿತು.
ಅಕ್ಕಿ, ಬೇಳೆ ಮತ್ತಿತರ ಆಹಾರ ಪದಾರ್ಥಗಳನ್ನು ಮುಂದಿನ ಎರಡು ತಿಂಗಳಿಗಾಗಿ ವಿತರಿಸಲಾಯಿತು. ಸಿಯಾತಲಾಬ್‌ನಲ್ಲಿ ಪ್ರಪ್ರಥಮ ಬಾರಿಗೆ ಪಡಿತರ ವಿತರಣೆ ಆರಂಭಿಸಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಊಟದ ದಿನಸು ದೊರೆಯಲು ತೊಂದರೆಯಾಗಬಾರದೆಂಬ ಉದ್ದೇಶದಿಂದ ಸರ್ಕಾರ ಈ ಪ್ಯಾಕೇಜ್ ಘೋಷಿಸಿದೆ. ಕಳೆದ ಒಂದು ವಾರದ ನಂತರ ಈಗ ಬಡವರಿಗೆ ಪ್ಯಾಕೇಜ್ ವಿತರಣೆ ಆರಂಭಗೊಂಡಿದ್ದು, ಅನೇಕರು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದರು.

Leave a Comment