ಬಡವರಿಗಾಗಿ ನೆರವಿಗೆ ಬಾರದ ಕೇಂದ್ರ ಸರಕಾರ ಹೃದಯಹೀನ: ಚಿದು ವಾಗ್ದಾಳಿ

ನವದೆಹಲಿ, ಎ 19- ಕರೋನ ಸಂಕಷ್ಟ , ಲಾಕ್ಡೌನ್ನ ಸಂದರ್ಭದಲ್ಲಿ ಬಡವರಿಗಾಗಿ ಏನನ್ನೂ ಮಾಡದ ಕೇಂದ್ರ ಸರಕಾರ ಹೃದಯಹೀನ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ತೀವ್ರವಾಗ್ದಾಳಿ ಮಾಡಿದ್ದಾರೆ.
ಬಹಳಷ್ಟು ಜನರ ಕೈಯಲ್ಲಿ ಹಣವಿಲ್ಲದೆ ಹತಾಶರಾಗಿದ್ದಾರೆ. ಉಚಿತ ಆಹಾರ ಪಡೆಯಲು ಉದ್ದನೆಯ ಸರದಿ ಸಾಲಿನಲ್ಲಿ ನಿಂತಿರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ .ಕೇವಲ ಹೃದಯಹೀನ ಸರಕಾರ ಮಾತ್ರ ಏನನ್ನೂ ಮಾಡದೆ ಈ ರೀತಿ ನಿಂತಿರಲು ಸಾಧ್ಯ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
,ಸರಕಾರ ಜನರನ್ನು ಹಸಿವಿನಿಂದ ಏಕೆ ರಕ್ಷಿಸಲು ಮುಂದಾಗುತ್ತಿಲ್ಲ. ಪ್ರತಿ ಬಡ ಕುಟುಂಬಕ್ಕೆ ನಗದು ಹಣವನ್ನು ವರ್ಗಾಯಿಸುವ ಮೂಲಕ ತನ್ನ ಘನತೆಯನ್ನು ಏಕೆ ಕಾಪಾಡಿಕೊಳ್ಳುತ್ತಿಲ್ಲ? ಗೋದಾಮಿನಲ್ಲಿ ಇರುವ 77 ಮಿಲಿಯನ್ ಟನ್ ಧಾನ್ಯದಲ್ಲಿ ಸ್ವಲ್ಪ ಭಾಗವನ್ನು ಸರಕಾರವು ಎಫ್ಸಿಐ ಮೂಲಕ ಹಸಿವಿನಿಂದ ಕಂಗಾಲಾಗಿರುವ ಕುಟುಂಬಗಳಿಗೆ ಉಚಿತವಾಗಿ ವಿತರಿಸಲು ಕಷ್ಟವೇನು ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ನನ್ನ ಪ್ರಶ್ನೆಗೆ ಉತ್ತರಿಸಲು ವಿಫಲರಾಗಿದ್ದಾರೆ. ದೇಶ ಅಸಹಾಯಕವಾಗಿ ನೋಡುತ್ತಿದೆ ಎಂದೂ ಚಿದಂಬರಂ ದೂರಿದ್ದಾರೆ

Leave a Comment