ಬಡತನ ತೊಲಗಲಿ-ದಿನೇಶ್ ಆಶಯ

ಬೆಂಗಳೂರು, ಆ.೯- ಸ್ವಾತಂತ್ರ ಸಂಗ್ರಾಮದ ಮಹತ್ವ ಘಟ್ಟವಾಗಿದ್ದ ಕ್ವಿಟ್ ಇಂಡಿಯಾ ಚಳುವಳಿಯ ಬಗ್ಗೆ ಎಲ್ಲರೂ ತಿಳಿಯುವಂತಾಗ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ನಗರದಲ್ಲಿಂದು ಬೆಂಗಳೂರು ಕಾಂಗ್ರೆಸ್ ಜಿಲ್ಲಾ ಸಮಿತಿ ಪುರ ಭವನದಲ್ಲಿ ಆಯೋಜಿಸಿದ್ದ, ೭೬ನೇ ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶತಯುಷಿ, ಚಳುವಳಿಗಾರ ಎಸ್.ವಿ. ಮಂಜುನಾಥ್ ಮಾತನಾಡಿ, ದೇಶಕ್ಕೆ ಅನೇಕ ಪರದೇಶಿಕರು ಬಂದು ಹೋದರು. ಆದರೆ, ಭಾರತದಂತಹ ಮಹಾನ್ ದೇಶದಲ್ಲಿ ಪ್ರಜೆಗಳಾಗಿರೋದು ನಮ್ಮೆಲ್ಲರ ಹೆಮ್ಮೆ ಎಂದರು.

ಇಂದು ಬಡತನ ಕ್ಬಿಟ್ ಇಂಡಿಯಾ ಆಗಬೇಕು.
ದೇಶದಲ್ಲಿ ಸಂಪೂರ್ಣ ಬಡತನ ನಿವಾರಣೆ ಆಗಬೇಕು ಎಂದ ಅವರು, ಪ್ರಪಂಚದ ಶೇ.೨೭ರಷ್ಟು ಬಡತನ ಭಾರತದಲ್ಲಿದೆ.ಅಲ್ಲದೆ, ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರು ಜೀವಾಂತವಾಗಿದ್ದರೆ, ಗರೀಬಿ ಹಠಾವೋ ಜಾರಿಗೊಳಿಸುತ್ತಿದ್ದರು ಎಂದು ನುಡಿದರು.

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ನಾನು ಭಾಗವಹಿಸಿದ್ದೆ. ಬ್ರಿಟಿಷರನ್ನು ದೇಶಬಿಟ್ಟು ಓಡಿಸಿದ್ದು ನಮ್ಮ ಹೋರಾಟ. ಆ ಚಳುವಳಿಯನ್ನ ನೆನಪಿಸುವ ಕಾರ್ಯಕ್ರಮ ಮಾಡಲಾಗಿದೆ. ನಮಗೆ ತುಂಬಾ ಸಂತೋಷ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹಮದ್, ಶಾಸಕರಾದ ಎನ್.ಎ.ಹ್ಯಾರಿಸ್, ಸೌಮ್ಯಾರೆಡ್ಡಿ, ಎಸ್.ಟಿ.ಸೋಮಶೇಖರ್ ಹಾಗೂ ಬಿ.ಎಲ್.ಶಂಕರ್, ಬಿಬಿಎಂಪಿ ಮೇಯರ್ ಸಂಪತ್ ರಾಜ್ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.

Leave a Comment